;Resize=(412,232))
ಮುಂಬೈ : ಭಾರತೀಯ ಪ್ರವಾಸಿಗರಿಗೆ ಸಮುದ್ರಯಾನದ ಹೊಸ ಅನುಭವ ನೀಡುತ್ತಿರುವ ಕಾರ್ಡೇಲಿಯಾ ಕ್ರೂಸ್ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾಗೂ ತನ್ನ ಪಯಣ ವಿಸ್ತರಿಸಲು ಸಜ್ಜಾಗಿದೆ.
ಈ ವಿಸ್ತರಣೆಯು 34 ದಿನಗಳ ಸಮುದ್ರಯಾನದಲ್ಲಿ ಏಳು ದೇಶಗಳು ಮತ್ತು ಏಳು ಬಂದರುಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಿದೆ.
ಮುಂಬೈನಲ್ಲಿ ನೂತನ ಕಾರ್ಡೇಲಿಯಾ ಸ್ಕೈ ಕ್ರೂಸ್ ಪರಿಚಯಿಸುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಯುರಿಗೆನ್ ಬೈಲೊಮ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದ ಸಿಡ್ನಿವರೆಗೆ ಕ್ರೂಸ್ ಸೇವೆ ಆರಂಭಿಸುವ ಯೋಜನೆ ಇದೆ. 34 ದಿನಗಳ ಈ ಸಮುದ್ರಯಾನದಲ್ಲಿ ಏಳು ದೇಶಗಳು ಮತ್ತು ಏಳು ಬಂದರುಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗುತ್ತದೆ. ಭಾರತೀಯ ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸಮುದ್ರಯಾನದ ಅನುಭವ ಒದಗಿಸುವುದು ಸಂಸ್ಥೆಯ ಉದ್ದೇಶ. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರಯಾಣಿಕರಿಗೆ ವೀಸಾ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆಯೂ ಇದೆ’ ಎಂದರು.
ಮುಂದುವರೆದಂತೆ ಅವರು, ‘ಕಾರ್ಡೇಲಿಯಾ ಎಂಪ್ರೆಸ್ ಹಡಗನ್ನು ಕೊಚ್ಚಿಗೆ ಸ್ಥಳಾಂತರಿಸಿ, ಅಲ್ಲಿಂದ ಹೊಸ ಪ್ರವಾಸ ಮಾರ್ಗಗಳನ್ನು ರೂಪಿಸಲಾಗುವುದು. ಲಕ್ಷದ್ವೀಪದ ಇನ್ನಷ್ಟು ದ್ವೀಪಗಳು, ಮಾಲೆ ಮತ್ತು ಕೊಲಂಬೊ ಸೇರಿದಂತೆ ಹಲವು ತಾಣಗಳನ್ನು ಒಳಗೊಂಡ ಸಮುದ್ರಯಾನಗಳನ್ನು ಪರಿಚಯಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸ ಮಾರ್ಗಗಳನ್ನು ಸೇರ್ಪಡೆಗೊಳಿಸಲಾಗುವುದು’ ಎಂದು ಅವರು ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡರು.
ಕಾರ್ಡೇಲಿಯಾ ಸ್ಕೈ ಹೆಸರಿನ ಕುರಿತು ವಿವರಿಸಿದ ಅವರು, ‘ಕಾರ್ಡೇಲಿಯಾ’ ಎಂಬ ಹೆಸರಿಗೆ ‘ಸಮುದ್ರದ ಮಗಳು’ ಎಂಬ ಅರ್ಥವಿದೆ. ಸ್ಕೈ ಅಂದರೆ ಮಿತಿಯಿಲ್ಲದ್ದು. ಇವೆರಡರ ಸಂಗಮ ಈ ಹೆಸರಿನಲ್ಲಿದೆ ಎಂದು ಅವರು ಹೇಳಿದರು. ಪ್ರವಾಸಿಗರೊಂದಿಗೆ ದೀರ್ಘಕಾಲದ ಸಂಬಂಧ ಬೆಳೆಸುವ ಉದ್ದೇಶದಿಂದ ಸಂಸ್ಥೆ ‘ಟೆರನ್ಸ್ ಕ್ಲಬ್’ ಎಂಬ ಯೋಜನೆಯಡಿ ಎಲ್ಲ ಸದಸ್ಯರಿಗೂ ಆರಂಭದಲ್ಲೇ ಗೋಲ್ಡ್ ಶ್ರೇಣಿಯ ಸ್ಥಾನಮಾನ ನೀಡಲಾಗುತ್ತದೆ.
ಒಂದು ಹಡಗಿನಿಂದ ಆರಂಭವಾದ ಸಂಸ್ಥೆಯ ಪ್ರಯಾಣ ಇಂದು ಭಾರತೀಯ ಪ್ರವಾಸಿಗರನ್ನು ಒಗ್ಗೂಡಿಸುವ ಸಮುದಾಯವಾಗಿ ಬೆಳೆದಿದೆ. ಹಡಗು, ಸಿಬ್ಬಂದಿ, ಅಧಿಕಾರಿಗಳು, ಪೂರೈಕೆ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಪಾಲುದಾರರ ಸಹಕಾರದಿಂದ ಇಂತಹ ಬೃಹತ್ ಸಮುದ್ರಯಾನ ಯೋಜನೆಗಳು ಸಾಧ್ಯವಾಗುತ್ತವೆ ಎಂದು ಅವರು ಇದೇ ವೇಳೆ ಹೇಳಿದರು.
ಕಾರ್ಡೇಲಿಯಾ ಸ್ಕೈ 12 ಡೆಕ್‌ಗಳನ್ನು ಹೊಂದಿದ್ದು, 1002 ಕ್ಯಾಬಿನ್‌ಗಳಿವೆ. ಸುಮಾರು 2000 ಪ್ರಯಾಣಿಕರು ಸಂಚರಿಸಬಹುದು. 10 ರೆಸ್ಟೋರೆಂಟ್, 11 ಬಾರ್ ಮತ್ತು ಲಾಂಜ್, ಸುಸಜ್ಜಿತ ಥಿಯೇಟರ್‌ಗಳು ಸಹ ಇವೆ.