;Resize=(412,232))
17 ಕ್ಯಾನ್ಸರ್ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ತೆಗೆದು ಹಾಕಿರುವುದಾಗಿ ಹಣಕಾಸು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದಾಗಿ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಿ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತುಸು ರಿಲೀಫ್ ಸಿಕ್ಕಿದೆ.
ಮುಂದುವರಿದ ಹಾಗೂ ಸಂಕೀರ್ಣ ಚಿಕಿತ್ಸಾ ಘಟ್ಟದಲ್ಲಿ ದುಬಾರಿ ಕ್ಯಾನ್ಸರ್ ಔಷಧಗಳನ್ನು ಬಳಸಲಾಗುತ್ತದೆ. ಈ ಔಷಧಗಳು ಭಾರತದಲ್ಲಿ ಹೆಚ್ಚು ಉತ್ಪಾದನೆಯಾಗುವುದಿಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಏಕೆಂದರೆ, ಅಂತಹ ಔಷಧಗಳು ತಯಾರಾಗುವುದು ಅಮರಿಕ ಹಾಗೂ ಯುರೋಪ್‌ನಂತಹ ದೇಶಗಳಲ್ಲಿ. ದುಬಾರಿ ಔಷಧದ ಮೇಲೆ ಸೀಮಾ ಸುಂಕ ಹೇರುವುದರಿಂದ ರೋಗಿಗಳಿಗೆ ಮತ್ತಷ್ಟು ಹೊರೆ ಆಗುತ್ತಿತ್ತು. ಸುಂಕ ಕಡಿತದಿಂದ ರೋಗಿಗಳಿಗೆ ಅನುಕೂಲವಾಗಲಿದೆ.
ಆಸ್ಪತ್ರೆಗಳ ಒಂದು ಅಂದಾಜಿನ ಪ್ರಕಾರ, ಕೊನೆಯ ಹಂತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೆಲವು ಬಾರಿ ಚಿಕಿತ್ಸಾ ವೆಚ್ಚವೇ ತಿಂಗಳಿಗೆ 2ರಿಂದ 10 ಲಕ್ಷ ರು.ವರೆಗೂ ಆಗುತ್ತದೆ. ರೋಗಿಗಳ ಕುಟುಂಬದವರಿಗೆ ಔಷಧವನ್ನು ಪೂರೈಸುವುದೇ ದೊಡ್ಡ ಆರ್ಥಿಕ ಸವಾಲು ಆಗಿರುತ್ತದೆ.