ಅಕ್ರಮವಾಗಿ ಮತದಾರೆ ಆದ ಪ್ರಕರಣ
ಮತದಾರ ನೋಂದಣಿ ಚು.ಆಯೋಗದ ಅಧಿಕಾರಅದರ ವ್ಯಾಪ್ತಿಯಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ
ಅರ್ಜಿದಾರರಿಂದ 1980ರ ಮತಪಟ್ಟಿ ಜೆರಾಕ್ಸ್ ಸಲ್ಲಿಕೆಜೆರಾಕ್ಸ್ ಪ್ರತಿ ಆಧರಿವಿ ವಿಚಾರಣೆ ಅಸಾಧ್ಯ: ಕೋರ್ಟ್ಪಿಟಿಐ ನವದೆಹಲಿ
‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ನಾಗರಿಕರಾಗುವ 3 ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.ದೂರುದಾರ ವಿಕಾಸ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ, ‘ಅರ್ಜಿಯಲ್ಲಿ ಹುರುಳಿಲ್ಲ. ವಜಾಗೊಳಿಸುತ್ತಿದ್ದೇವೆ’ ಎಂದು ಹೇಳಿ ವಿಚಾರಣೆಗೆ ಮಂಗಳ ಹಾಡಿದರು.
‘ಯಾರನ್ನು ಮತದಾರ ಮಾಡಬೇಕು ಎಂಬುದು ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುತ್ತದೆ. ಇದರಲ್ಲಿ ತಾನು ಮಧ್ಯಪ್ರವೇಶಿಸಲ್ಲ. ಇನ್ನು ಪೌರತ್ವ ನೀಡಿಕೆ ಕೇಂದ್ರಕ್ಕೆ ಸಂಬಂಧಿಸಿದ ವಿಷಯ. ನ್ಯಾಯಾಲಯಕ್ಕೆ ಸಂಬಂಧವಿಲ್ಲ’ ಎಂದ ಪೀಠ, ‘ಅರ್ಜಿದಾರರು 1980ರ ಮತದಾರ ಪಟ್ಟಿಯಲ್ಲಿ ಸೋನಿಯಾ ಇದ್ದಾರೆ ಎಂಬ ಜೆರಾಕ್ಸ್ ಪ್ರತಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ವಿಚಾರಣೆ ನಡೆಸಲಾಗದು’ ಎಂದಿತು.ಸೆ.10ರಂದು ದೂರುದಾರ ವಿಕಾಸ್ ತ್ರಿಪಾಠಿ ಪರ ಹಾಜರಾಗಿದ್ದ ಹಿರಿಯ ವಕೀಲ ಪವನ್ ನಾರಂಗ್, ‘1983ರ ಏಪ್ರಿಲ್‌ನಲ್ಲಿ ಸೋನಿಯಾ ಭಾರತದ ಪೌರತ್ವ ಪಡೆದಿದ್ದರು. ಆದರೆ, 1980ರಲ್ಲೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು. ಈ ನಡುವೆ, 1982ರಲ್ಲಿ ಹೆಸರು ಅಳಿಸಿಹಾಕಲಾಗಿತ್ತು ಮತ್ತು ನಂತರ 1983 ರಲ್ಲಿ ಮತ್ತೆ ಸೇರಿಸಲಾಯಿತು’ ಎಂದು ವಾದಿಸಿದ್ದರು.
‘1980ರಲ್ಲಿ ಪಡಿತರ ಚೀಟಿ ಅಥವಾ ಪಾಸ್‌ಪೋರ್ಟ್ ವಿಳಾಸ ಆಧರಿಸಿ ಅವರಿಗೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎನ್ನಿಸುತ್ತದೆ, ಅವರು ನಿಜವಾಗಿಯೂ ನಾಗರಿಕರೇ ಆಗಿದ್ದರೆ, 1982ರಲ್ಲಿ ಹೆಸರನ್ನು ಏಕೆ ಅಳಿಸಲಾಯಿತು?’ ಎಂದು ಪ್ರಶ್ನಿಸಿದ್ದರು.