ಸಿಪಿಎಂನ ಪಾಲಿಟ್‌ಬ್ಯೂರೋ ಮತ್ತು ಕೇಂದ್ರೀಯ ಸಮಿತಿಯ ಸಮನ್ವಯಕಾರಾಗಿ ಪ್ರಕಾಶ್‌ ಕಾರಟ್‌ ಆಯ್ಕೆ

KannadaprabhaNewsNetwork | Updated : Sep 30 2024, 05:55 AM IST

ಸಾರಾಂಶ

ಸಿಪಿಎಂ ಪಕ್ಷದ ಹಿರಿಯ ನಾಯಕ ಪ್ರಕಾಶ್ ಕಾರಟ್‌ ಅವರನ್ನು ಪಕ್ಷದ ಪಾಲಿಟ್‌ಬ್ಯೂರೋ ಮತ್ತು ಕೇಂದ್ರೀಯ ಸಮಿತಿಯ ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ. ಸೀತಾರಾಂ ಯೆಚೂರಿ ಅವರ ನಿಧನದ ನಂತರ ಈ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ.

ನವದೆಹಲಿ: ಸಿಪಿಎಂನ ಪಾಲಿಟ್‌ಬ್ಯೂರೋ ಮತ್ತು ಕೇಂದ್ರೀಯ ಸಮಿತಿಯ ಸಮನ್ವಯಕಾರರಾಗಿ ಪಕ್ಷದ ಹಿರಿಯ ನಾಯಕ ಪ್ರಕಾಶ್‌ ಕಾರಟ್‌ ಅವರನ್ನು ನೇಮಿಸಲಾಗಿದೆ. ಭಾನುವಾರ ಇಲ್ಲಿ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

 ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನೆಡೆಸುವ ಹೊಣೆಯನ್ನು ಸದ್ಯಕ್ಕೆ ಕಾರಟ್‌ಗೆ ವಹಿಸಲಾಗಿದೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಪಕ್ಷದ ವಾರ್ಷಿಕ ಸಭೆಯಲ್ಲಿ ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಲಾಗುವುದು. 2005-2015ರವರೆಗೆ ಕಾರಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಕಾಶ್‌ ಕಾರಟ್‌ ಸಿಪಿಎಂ ಸಮನ್ವಯಕಾರರಾಗಿ ಆಯ್ಕೆ

ನವದೆಹಲಿ: ಸಿಪಿಎಂನ ಪಾಲಿಟ್‌ಬ್ಯೂರೋ ಮತ್ತು ಕೇಂದ್ರೀಯ ಸಮಿತಿಯ ಸಮನ್ವಯಕಾರರಾಗಿ ಪಕ್ಷದ ಹಿರಿಯ ನಾಯಕ ಪ್ರಕಾಶ್‌ ಕಾರಟ್‌ ಅವರನ್ನು ನೇಮಿಸಲಾಗಿದೆ. ಭಾನುವಾರ ಇಲ್ಲಿ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನೆಡೆಸುವ ಹೊಣೆಯನ್ನು ಸದ್ಯಕ್ಕೆ ಕಾರಟ್‌ಗೆ ವಹಿಸಲಾಗಿದೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಪಕ್ಷದ ವಾರ್ಷಿಕ ಸಭೆಯಲ್ಲಿ ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಲಾಗುವುದು. 2005-2015ರವರೆಗೆ ಕಾರಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ತಿರುಪತಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಮತ್ತೆ ಚಿರತೆ ಪತ್ತೆ: ಆತಂಕ

ತಿರುಮಲ: ತಿರುಮಲ ದೇಗುಲಕ್ಕೆ ಕಾಲ್ನಡಿಗೆ ಮೂಲಕ ತೆರಳುವ ಮಾರ್ಗದಲ್ಲಿ ಮತ್ತೆ ಚಿರತೆ ಕಂಡುಬಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ವೇಳೆ ಕೆಲ ನಾಯಿಗಳು ಚಿರತೆಯನ್ನು ಬೆದರಿಸಿ ಓಡಿಸಿವೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು ಕಾಲ್ನಡಿಗೆ ಮಾರ್ಗದ ಹಲವು ಕಡೆ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಿ ಚಿರತೆ ಸುಳಿವಿಗೆ ಮುಂದಾಗಿದ್ದಾರೆ. ಕೆಲ ತಿಂಗಳ ಹಿಂದೆ ಕೂಡಾ ಇದೇ ಮಾರ್ಗದಲ್ಲಿ ಚಿರತೆ ಪತ್ತೆಯಾಗಿತ್ತು. ಬಳಿಕ ಅವುಗಳನ್ನು ಸೆರೆಹಿಡಿದ ಹಿನ್ನೆಲೆಯಲ್ಲಿ ಭಕ್ತರು ನಿರಾಳರಾಗಿದ್ದರು. ಅದರ ಬೆನ್ನಲ್ಲೇ ಮತ್ತೆ ಇದೀಗ ಚಿರತೆಯೊಂದು ಕಾಣಿಸಿಕೊಂಡಿದೆ.

ಸೆಂಥಿಲ್‌ ಸೇರಿ ನಾಲ್ವರು ಸಚಿವರಾಗಿ ಪ್ರಮಾಣ: ಉದಯನಿಧಿ ಪದೋನ್ನತಿ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಿದ್ದು, ಸಚಿವ ಹಾಗೂ ಸಿಎಂ ಎಂ.ಕೆ. ಸ್ಟಾಲಿನ್‌ ಪುತ್ರ ಉದಯನಿಧಿ ಮಾರನ್‌ಗೆ ಉಪಮುಖ್ಯಮಂತ್ರಿ ಪಟ್ಟಕ್ಕೆ ಪದೋನ್ನತಿ ನೀಡಲಾಗಿದೆ. ಇದೇ ವೇಳೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನು ಪಡೆದು ಬಿಡುಗಡೆಯಾದ ಡಿಎಂಕೆ ಶಾಸಕ ವಿ.ಸೆಂಥಿಲ್‌ ಬಾಲಾಜಿ ಸೇರಿ ನಾಲ್ವರು ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.ಬಾಲಾಜಿ ಜತೆ ಪ್ರಮಾಣವಚನ ಸ್ವೀಕರಿಸಿದವರೆಂದರೆ ಸೇಲಂ ಉತ್ತರ ಕ್ಷೇತ್ರದ ಡಿಎಂಕೆ ಶಾಸಕ ಆರ್‌ ರಾಜೇಂದ್ರನ್‌, ತಿರುವಿದೈಮುರುಧರ್‌ನ ಶಾಸಕ ಗೋವಿ ಚೇಳಿಯಾನ್‌ ಮತ್ತು ಅವಧಿಯ ಶಾಸಕ ಎಸ್‌.ಎಂ.ನಾಸರ್. ರಾಜ್ಯಪಾಲ ಆರ್‌.ಎನ್‌.ರವಿ ಅವರು ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು.

ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನೂತನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಉಪಸ್ಥಿತರಿದ್ದರು.ಪದೋನ್ನತಿ ಆಗಿದ್ದರಿಂದ ಉದಯನಿಧಿ ಪ್ರಮಾಣವಚನ ಸ್ವೀಕರಿಸುವ ನಿಯಮ ಇರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಡಿಸಿಎಂ ಹುದ್ದೆ ಹೆಚ್ಚಿನ ಹೊಣೆಗಾರಿಕೆ ಮಾತ್ರ. ಅದು ಸ್ಥಾನಮಾನವಲ್ಲ’ ಎಂದಿದ್ದಾರೆ.

ಜೂ.ಎನ್‌ಟಿಆರ್‌ರ ದೇವರ ಚಾಪ್ಟರ್‌-1: 2 ದಿನದಲ್ಲಿ ₹ 243 ಕೋಟಿ ಗಳಿಕೆ

ಮುಂಬೈ: ಶುಕ್ರವಾರ ರಿಲೀಸ್‌ ಆದ ಜೂ.ಎನ್‌ಟಿಆರ್‌ ಅಭಿನಯದ ‘ದೇವರ ಚಾಪ್ಟರ್‌-1’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದ್ದು, ಬಿಡುಗಡೆಯಾದ ಎರಡೇ ದಿನದಲ್ಲಿ 243 ಕೋಟಿ ರು. ಗಳಿಸುವ ಮೂಲಕ ದಾಖಲೆ ಬರೆದಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಸೆ.27ರಂದು ಕನ್ನಡ, ತಮಿಳು, ತೆಲುವು ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್‌ ಆಗಿತ್ತು. ಬಿಡುಗಡೆಗೊಂಡು ಎರಡೇ ದಿನದಲ್ಲಿ 243 ಕೋಟಿ ರು.ಗಳಿಸಿ, ಯಶಸ್ವಿಯಾಗಿ ಮುನ್ನಗುತ್ತಿದೆ. ಸಿನಿಮಾದಲ್ಲಿ ಜೂ. ಎನ್‌ಟಿಆರ್‌ಗೆ, ಜಾಹ್ನವಿ ಕಪೂರ್‌, ಸೈಫ್‌ ಅಲಿಖಾನ್‌, ಪ್ರಕಾಶ್‌ ರಾಜ್‌ ಸೇರಿದಂತೆ ಬಹು ತಾರಾಂಗಣವಿದೆ.

Share this article