ಲಡಾಖ್‌ನಾ ಆಕ್ರಮಿತ ಹೋಟಾನ್‌ ಜಿಲ್ಲೆಯ ಬಳಿ 2 ಹೊಸ ಕೌಂಟಿ ರಚಿಸಿದ ಚೀನಾ : ಭಾರತ ಆಕ್ಷೇಪ

KannadaprabhaNewsNetwork |  
Published : Jan 04, 2025, 12:32 AM ISTUpdated : Jan 04, 2025, 04:48 AM IST
ಚೀನಾ | Kannada Prabha

ಸಾರಾಂಶ

  ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್‌) ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಕೌಂಟಿಗಳನ್ನು ‘ಹಿಯಾನ್‌’ ಹಾಗೂ ‘ಹೆಕಾಂಗ್‌’ ಎಂದು ಹೆಸರಿಸಿದೆ.

ನವದೆಹಲಿ: ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್‌) ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಕೌಂಟಿಗಳನ್ನು ‘ಹಿಯಾನ್‌’ ಹಾಗೂ ‘ಹೆಕಾಂಗ್‌’ ಎಂದು ಹೆಸರಿಸಿದೆ.

ಚೀನಾದ ಈ ನಡೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಚೀನಾವು ನಮ್ಮ ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ಭಾರತ ಎಂದೂ ಒಪ್ಪಿಲ್ಲ. ಚೀನಾ, ಹೋಟಾನ್ ಪ್ರಾಂತ್ಯದಲ್ಲಿ ರಚಿಸಲು ಹೊರಟಿರುವ 2 ಕೌಂಟಿಯ ಕೆಲ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿವೆ’ ಎಂದಿದ್ದಾರೆ. ‘ಹೊಸ ಪ್ರಾಂತ್ಯಗಳನ್ನು ರಚಿಸುವ ಮೂಲಕ ಚೀನಾ ಭಾರತದ ಸಾರ್ವಭೌಮತ್ವದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಚೀನಾದ ಅಕ್ರಮ ಹಾಗೂ ಬಲವಂತದ ಅತಿಕ್ರಮಣಕ್ಕೆ ಭಾರತ ಮಾನ್ಯತೆ ನೀಡುವುದಿಲ್ಲ. ಈ ಸಂಬಂಧ ನಮ್ಮ ವಿರೋಧವನ್ನು ರಾಜತಾಂತ್ರಿಕ ಮಾಧ್ಯಮಗಳ ಮೂಲಕ ಚೀನಾಗೂ ತಿಳಿಸಲಾಗಿದೆ’ ಎಂದು ಜೈಸ್ವಾಲ್‌ ಹೇಳಿದರು.

1962ರಲ್ಲಿ ಭಾರತದ ಮೇಲೆ ದಾಳಿ ಮಾಡಿದ್ದ ಚೀನಾ ಆಗ ಅಕ್ಸಾನ್‌ಚಿನ್‌ ಒಳಗೊಂಡಂತ ಲಡಾಖ್‌ನ ಹಲವು ಭಾಗಗಳನ್ನು ಅತಿಕ್ರಮಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
ತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ನತ್ತ