ನಾನು ಬ್ಲ್ಯಾಕ್‌ಮೇಲ್‌ ರಾಜಕೀಯ ಮಾಡಲ್ಲ: ವದಂತಿ ಬಗ್ಗೆ ಡಿ.ಕೆ.ಶಿವಕುಮಾರ್‌ ಕಿಡಿ

KannadaprabhaNewsNetwork |  
Published : Nov 17, 2025, 01:02 AM ISTUpdated : Nov 17, 2025, 05:12 AM IST
DK Shivakumar

ಸಾರಾಂಶ

‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ಕೊಡಲಿ?. ನನಗೆ ಮೆಂಟಲಿ, ಫಿಜಿಕಲಿ, ಪೊಲಿಟಿಕಲಿ ಹೆಲ್ತ್ ಕರೆಕ್ಟಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ನುಡಿದಿದ್ದಾರೆ.

  ನವದೆಹಲಿ :  ‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ಕೊಡಲಿ?. ನನಗೆ ಮೆಂಟಲಿ, ಫಿಜಿಕಲಿ, ಪೊಲಿಟಿಕಲಿ ಹೆಲ್ತ್ ಕರೆಕ್ಟಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ ಎಂಬ ಸುದ್ದಿ

ದೆಹಲಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾನೇಕೆ ರಾಜೀನಾಮೆ ನೀಡಲಿ?. ರಾಜೀನಾಮೆ ಕೊಡ್ತಿನಿ ಎಂದು ಹೇಳಲಿ.  

ನನ್ನ ಮಾನಸಿಕ, ದೈಹಿಕ, ರಾಜಕೀಯ ಆರೋಗ್ಯ ಸರಿಯಾಗಿದೆ

ನನ್ನ ಮಾನಸಿಕ, ದೈಹಿಕ, ರಾಜಕೀಯ ಆರೋಗ್ಯ ಸರಿಯಾಗಿದೆ. ಅಂತಹ ಸಂದರ್ಭವೇ ಉದ್ಭವ ಆಗಿಲ್ಲ. ಎಲ್ಲಿಯತನಕ ಕಾಂಗ್ರೆಸ್ ಪಕ್ಷ ನನಗೆ ಯಾವ ಹುದ್ದೆಯಲ್ಲಿ ಕೆಲಸ ಮಾಡು ಎಂದು ಹೇಳುತ್ತೋ, ಅಲ್ಲಿಯತನಕ ಆ ಹುದ್ದೆಯಲ್ಲಿ ಇರುತ್ತೇನೆ. ಒಬ್ಬ ಶಿಸ್ತಿನ ಸಿಪಾಯಿ ತರಹ ಕೆಲಸ ಮಾಡುತ್ತೇನೆ. ಯಾವ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡೋಲ್ಲ. ಹಗಲು-ರಾತ್ರಿ ಶ್ರಮವಹಿಸಿ ಪಕ್ಷ ಕಟ್ಟಿದವನು ನಾನು. ಪಕ್ಷಕ್ಕಾಗಿ ದುಡಿದಿದ್ದೇನೆ, ಮುಂದೆಯೂ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ’ ಎಂದರು.

ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಬಳಿ ಮಾತಾಡಿಕೊಳ್ತಾರೆ. ನನ್ನನ್ನು ಕರೆಸಿದರೆ ಹೋಗಿ ನನ್ನ ಅಭಿಪ್ರಾಯ ಹೇಳ್ತೀನಿ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದೆಲ್ಲಾ ನೀವು ಮಾಡುತ್ತಿರುವ ಚರ್ಚೆಯಷ್ಟೇ. ನನ್ನ ಬಳಿ, ಸಿದ್ದರಾಮಯ್ಯ ಬಳಿ ಅಥವಾ ಹೈಕಮಾಂಡ್ ಬಳಿ ಈ ಕುರಿತು ಚರ್ಚೆ ಆಗುತ್ತಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಡಿಸೆಂಬರ್‌ನೊಳಗೆ ನೂರು ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪೂಜೆ ಮಾಡಬೇಕು. ಕಾಂಗ್ರೆಸ್ ಕಚೇರಿ ನಿರ್ಮಾಣದ ಕಟ್ಟಡ ನಕ್ಷೆ ಅನುಮೋದನೆಗೆ ನಾನು ₹2.30 ಕೋಟಿ ಹಣವನ್ನು ಪಾವತಿಸುತ್ತಿದ್ದೇನೆ. ರಾಮಲಿಂಗಾರೆಡ್ಡಿ ಅವರ ಮುಂದಾಳತ್ವದಲ್ಲಿ ಒಂದು ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಡೆ ಕಚೇರಿ ನಿರ್ಮಾಣಕ್ಕೆ ಜಾಗ ಕೂಡ ಸಿದ್ಧವಾಗಿವೆ. ನೂರು ಕಚೇರಿ ನಿರ್ಮಾಣ ಕಾರ್ಯ ಮಾಡುತ್ತೇವೆ. ಸಮಾರಂಭಕ್ಕೆ ಖರ್ಗೆ, ರಾಹುಲ್‌ ಬರಬೇಕು ಎಂಬುದು ನನ್ನಾಸೆ. ಅದಕ್ಕೆ ದಿನಾಂಕ ನಿಗದಿ ಮಾಡಬೇಕು.  

ಗಾಂಧಿ ಭಾರತ ಅಂಥ ಪುಸ್ತಕ ಬರೆದಿದ್ದೇನೆ. ಗಾಂಧೀಜಿಯವರ ಕಾಲದಲ್ಲಿ ಹೇಗೆ ಅಧಿವೇಶನ ಆಯ್ತು. ನಮ್ಮ ಕಾಲದಲ್ಲಿ ಹೇಗಾಯ್ತು. ಖರ್ಗೆಯವರ ಕಾಲದಲ್ಲಿ ಏನು ಆಯ್ತು ಅಂತ ಬರೆದಿದ್ದೇನೆ. ಈ ಪುಸ್ತಕ ಬಿಡುಗಡೆಗೂ ದಿನಾಂಕ ನಿಗದಿ ಮಾಡಬೇಕು. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುಂಚೆ ಈ ಕಾರ್ಯಕ್ರಮ ಆಗಬೇಕು. ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇದೆಲ್ಲವನ್ನು ಯಾರು ಮಾಡಬೇಕು?. ನಾನೇ ಮಾಡಬೇಕು. ಈ ವಿಚಾರಗಳ ಬಗ್ಗೆ ಚರ್ಚಿಸಲು ಖರ್ಗೆಯವರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆರಾಜೀನಾಮೆ ಕೊಡಲಿ: ಡಿಸಿಎಂ- ಅಂಥ ಸಂದರ್ಭವೇ ಉದ್ಭವ ಆಗಿಲ್ಲ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೈಕಮಾಂಡ್ ಮೇಲೆ ಒತ್ತಡಕ್ಕೆ ಡಿಕೆಶಿ ಕಾರ್ಯತಂತ್ರ ಎಂಬ ವದಂತಿಗೆ ಡಿಸಿಎಂ ಗರ

ನಾನೇಕೆ ರಾಜೀನಾಮೆ ನೀಡಲಿ? ಅಂಥ ಸಂದರ್ಭ ಉದ್ಭವ ಆಗಿಲ್ಲ. ನನ್ನ ಮಾನಸಿಕ, ದೈಹಿಕ, ರಾಜಕೀಯ ಆರೋಗ್ಯ ಸರಿಯಾಗಿದೆ

ಪಕ್ಷ ಯಾವ ಹುದ್ದೆಯಲ್ಲಿ ಕೆಲಸ ಮಾಡು ಎಂದು ಹೇಳುತ್ತೋ, ಅಲ್ಲಿಯತನಕ ಆ ಹುದ್ದೆಯಲ್ಲಿ ಇರುವೆ. ಶಿಸ್ತಿನ ಸಿಪಾಯಿ ತರಹ ಕೆಲಸ ಮಾಡುವೆ

ಯಾವ ಕಾರಣಕ್ಕೂ ನಾನು ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡೋಲ್ಲ. ಹಗಲು-ರಾತ್ರಿ ಪಕ್ಷಕ್ಕಾಗಿ ದುಡಿದಿದ್ದೇನೆ, ಮುಂದೆಯೂ ಅದನ್ನೇ ಮಾಡುವೆ: ಡಿಕೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!