ವೆಡ್ ಇನ್‌ ಇಂಡಿಯಾಗೆ ಪ್ರಧಾನಿ ಮೋದಿ ಕರೆ

KannadaprabhaNewsNetwork |  
Published : Dec 01, 2025, 01:00 AM ISTUpdated : Dec 01, 2025, 05:43 AM IST
 mann ki baat

ಸಾರಾಂಶ

ಈ ಹಿಂದೆ ಭಾರತದಲ್ಲೇ ಮದುವೆ ಪ್ರವಾಸೋದ್ಯಮ ಉತ್ತೇಜಿಸಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ. ವೆಡ್‌ ಇನ್‌ ಇಂಡಿಯಾ’ ಎಂದು ಕರೆ ನೀಡಿದ್ದಾರೆ.

 ನವದೆಹಲಿ: ಈ ಹಿಂದೆ ಭಾರತದಲ್ಲೇ ಮದುವೆ ಪ್ರವಾಸೋದ್ಯಮ ಉತ್ತೇಜಿಸಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ. ವೆಡ್‌ ಇನ್‌ ಇಂಡಿಯಾ’ ಎಂದು ಕರೆ ನೀಡಿದ್ದಾರೆ.

ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮ

ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ‘ಚಳಿಗಾಲದಲ್ಲಿ, ವೆಡ್‌ ಇನ್‌ ಇಂಡಿಯಾ’ ಅಭಿಯಾನವು ವಿಭಿನ್ನ ಆಕರ್ಷಣೆ ಹೊಂದಿದೆ. ಚಳಿಗಾಲದ ಹೊಳೆಯುವ ಹೊಂಬಣ್ಣದ ಬಿಸಿಲೇ ಇರಲಿ, ಪರ್ವತಗಳ ಇಳಿಜಾರಿನ ಮೇಲಿನ ಮಂಜಿನ ಹೊದಿಕೆಯೇ ಇರಲಿ, ಡೆಸ್ಟಿನೇಷನ್‌ ವಿವಾಹಕ್ಕೆ ಪರ್ವತಗಳು ಕೂಡಾ ಬಹಳ ಜನಪ್ರಿಯವಾಗುತ್ತಿವೆ. ಅನೇಕ ವಿವಾಹಗಳಂತೂ ಈಗ ವಿಶೇಷವಾಗಿ ಗಂಗಾ ನದಿಯ ತೀರದಲ್ಲಿ ನಡೆಯುತ್ತಿವೆ’ ಎಂದರು.

ಹಿಮಾಲಯದ ಕಣಿವೆಗಳು ವಿಶೇಷ ಅನುಭವದ ಭಾಗ

‘ಚಳಿಗಾಲದ ಈ ದಿನಗಳಲ್ಲಿ ಹಿಮಾಲಯದ ಕಣಿವೆಗಳು ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂತಹ ಒಂದು ವಿಶೇಷ ಅನುಭವದ ಭಾಗವಾಗುತ್ತವೆ. ಈ ಚಳಿಗಾಲದಲ್ಲಿ ಎಲ್ಲಿಗಾದರೂ ಪ್ರವಾಸ ಹೋಗಬೇಕೆಂದು ನೀವು ಆಲೋಚಿಸುತ್ತಿದ್ದಲ್ಲಿ, ಹಿಮಾಲಯದ ಕಣಿವೆಗಳ ಆಯ್ಕೆಯನ್ನು ಖಂಡಿತವಾಗಿಯೂ ಇರಿಸಿಕೊಳ್ಳಿ’ ಎಂದೂ ಕರೆ ನೀಡಿದರು. ಜೊತೆಗೆ ಕಾರವಾರದ ವಾರ್‌ಶಿಪ್‌ ಮ್ಯೂಸಿಯಂ ಕೂಡಾ ಪ್ರವಾಸಿಗರ ಭೇಟಿಗೆ ಉತ್ತಮ ಸ್ಥಳ ಎಂದು ಸಲಹೆ ನೀಡಿದರು.

‘ಚಳಿಗಾಲದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಸಂಪರ್ಕ ಮತ್ತು ಮೂಲ ಸೌಕರ್ಯಕ್ಕೆ ಕೂಡಾ ಉತ್ತರಾಖಂಡ ಗಮನ ಹರಿಸಿದೆ. ಹೋಂ ಸ್ಟೇಗಳ ಕುರಿತಂತೆ ಹೊಸ ನೀತಿಯನ್ನು ಕೂಡಾ ರೂಪಿಸಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಳಿಗಾಲದ ಟೂರಿಸಂ ಉತ್ತೇಜಿಸಿ

ಚಳಿಗಾಲದ ಪ್ರವಾಸಕ್ಕೆ ಕಾರವಾರ ವಾರ್‌ಶಿಪ್‌ ಮ್ಯೂಸಿಯಂ ಪರಿಗಣಿಸಿಸಲು ಸಲಹೆ

ಈ ಹಿಂದೆ ಭಾರತದಲ್ಲೇ ಮದುವೆ ಪ್ರವಾಸೋದ್ಯಮ ಉತ್ತೇಜನಕ್ಕೆ ಕರೆ ನೀಡಿದ್ದ ಪ್ರಧಾನಿ ಮೋದಿ

ಇದೀಗ ಚಳಿಗಾಲದ ಸುಂದರ ಋತುವಿನಲ್ಲಿ ಭಾರತದಲ್ಲೇ ಮದುವೆಯಾಗುವಂತೆ ನಾಗರಿಕರಿಗೆ ಕರೆ

ಡೆಸ್ಟಿನೇಷನ್‌ ಮದುವೆಗೆ ಭಾರತ ಸುಂದರ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ

ಪ್ರವಾಸಕ್ಕೆ ಹಿಮಾಚಲ ಕಣಿವೆ, ಉತ್ತರಾಖಂಡ, ಕಾರವಾರದ ವಾರ್‌ಸಿಪ್‌ ಮ್ಯೂಸಿಯಂ ಪರಿಗಣಿಸಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ!
ವಸಾಹತುಶಾಹಿ ಗುರುತು ಅಳಿಸಿ ಹಾಕಲು ರಾಜಭವನ ಇನ್ನು ಲೋಕಭವನ