ನವದೆಹಲಿ: ಮದ್ಯ ಲೈಸೆನ್ಸ್ ಹಗರಣದಲ್ಲಿ ಚುನಾವಣಾ ಪ್ರಚಾರದ ನಿಮಿತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವೈದ್ಯಕೀಯ ಪರೀಕ್ಷೆಗಾಗಿ 1 ವಾರ ವಿಸ್ತರಣೆ ಮಾಡಲು ದೆಹಲಿ ಕೋರ್ಟ್ ನಿರಾಕರಿಸಿದೆ.
ಅಲ್ಲದೆ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜೂ.19ರವರೆಗೂ ವಿಸ್ತರಿಸಿದರು. ಕೇಜ್ರಿವಾಲ್ ಅವರ ಸಾಮಾನ್ಯ ಜಾಮೀನು ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ.
ಕೇಜ್ರಿವಾಲ್ ಅವರು ತಮಗೆ ಕ್ಯಾನ್ಸರ್ ಸೇರಿ ನಾನಾ ಕಾಯಿಲೆಗಳು ಇರಬಹುದು. ಹೀಗಾಗಿ ತಪಾಸಣೆ ಅಗತ್ಯ ಎಂದು ಅರ್ಜಿಯಲ್ಲಿ ಹೇಳಿದ್ದರು.ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಚುನಾವಣಾ ಪ್ರಚಾರದ ನಿಮಿತ್ತ 21 ದಿನಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದ್ದ ನ್ಯಾಯಾಲಯ ಜೂ.2ರಂದು ಶರಣಾಗುವಂತೆ ಆದೇಶಿಸಿತ್ತು. ಈ ನಡುವೆ ಅರವಿಂದ್ ಕೇಜ್ರಿವಾಲ್ ತಮಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಒಂದು ವಾರ ಜಾಮೀನು ವಿಸ್ತರಿಸುವಂತೆ ಅರ್ಜಿ ಸಲ್ಲಿಸಿದ್ದರು.