ಅಮೆರಿಕ ತೆರಿಗೆ ಪರಿಣಾಮ ಮೋದಿಪುಟಿನ್‌ಗೆ ಕರೆ: ನ್ಯಾಟೋ ಮುಖ್ಯಸ್ಥ

KannadaprabhaNewsNetwork |  
Published : Sep 27, 2025, 12:03 AM ISTUpdated : Sep 27, 2025, 04:32 AM IST
ಮೋದಿ | Kannada Prabha

ಸಾರಾಂಶ

  ಅಮೆರಿಕದ ತೆರಿಗೆಯಿಂದಾಗಿ ಭಾರತದ ಮೇಲೆ ಒತ್ತಡ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿ ಉಕ್ರೇನ್‌ ಜತೆಗಿನ ಯುದ್ಧದಲ್ಲಿ ಅವರ ಮುಂದಿನ ನಡೆಯೇನೆಂದು ವಿಚಾರಿಸಿದ್ದಾರೆ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್‌ ರುಟ್ಟೆ ಹೇಳಿದ್ದಾರೆ.

 ಲಂಡನ್‌: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿದ್ದಕ್ಕೆ ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸುವ ಉದ್ದೇಶದಿಂದ ಎಂದು ಅಮೆರಿಕ ಹೇಳುತ್ತಿರುವ ನಡುವೆಯೇ, ಅಮೆರಿಕದ ತೆರಿಗೆಯಿಂದಾಗಿ ಭಾರತದ ಮೇಲೆ ಒತ್ತಡ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿ ಉಕ್ರೇನ್‌ ಜತೆಗಿನ ಯುದ್ಧದಲ್ಲಿ ಅವರ ಮುಂದಿನ ನಡೆಯೇನೆಂದು ವಿಚಾರಿಸಿದ್ದಾರೆ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್‌ ರುಟ್ಟೆ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ‘ರಷ್ಯಾದ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇನ್ನಷ್ಟು ನಿರ್ಬಂಧಗಳನ್ನು ಹೇರುತ್ತಾರೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ರುಟ್ಟೆ, ‘ಟ್ರಂಪ್‌ ಈಗಾಗಲೇ ಆ ಕೆಲಸವನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಇಟ್ಟಿರುವ ದೊಡ್ಡ ಹೆಜ್ಜೆಯೆಂದರೆ ಭಾರತದ ಮೇಲೆ ಹೇರಲಾಗಿರುವ ತೆರಿಗೆ. ಅದು ಪರಿಣಾಮ ಬೀರಿದೆ. ಏಕೆಂದರೆ, ಮೋದಿಯವರು ಪುಟಿನ್‌ಗೆ ಕರೆ ಮಾಡಿ, ನಾವು ನಿಮ್ಮನ್ನು ಬೆಂಬಲಿಸುತ್ತಿದ್ದೇವೆ. ಆದರೆ ನಮ್ಮ ಮೇಲೆ ಶೇ.50ರಷ್ಟು ತೆರಿಗೆ ಹೇರಲಾಗಿದೆ. ಆದ್ದರಿಂದ ನಿಮ್ಮ ಯುದ್ಧತಂತ್ರವೇನೆಂದು ಹೇಳಬಹುದೇ?’ ಎಂದು ಕೇಳಿದರು’ ಎಂದಿದ್ದಾರೆ.

ಜತೆಗೆ, ‘ಟ್ರಂಪ್‌ ತಮ್ಮ ಯುದ್ಧಸ್ಥಗಿತದ ಯತ್ನವನ್ನು ಮುಂದುವರೆಸುತ್ತಿದ್ದಾರೆ’ ಎಂದೂ ರುಟ್ಟೆ ತಿಳಿಸಿದ್ದಾರೆ.

ನ್ಯಾಟೋ ಮುಖ್ಯಸ್ಥನ ಹೇಳಿಕೆ ಆಧಾರರಹಿತ: ಭಾರತ

ರುಟ್ಟೆ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತ, ಅದನ್ನು ಆಧಾರರಹಿತ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ನ್ಯಾಟೋ ಮುಖ್ಯಸ್ಥರು ಹೇಳಿದಂತೆ ಮೋದಿ ಮತ್ತು ಪುಟಿನ್‌ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಮುಂದೆ ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದಿರಿ’ ಎಂದಿದೆ.

- ಉಕ್ರೇನ್‌ ವಿಷಯದಲ್ಲಿ ಮುಂದಿನ ನಡೆ ಏನೆಂದು ಪ್ರಶ್ನೆ

- ಟ್ರಂಪ್ ತೆರಿಗೆ ಹೊರೆ ಕಾರಣ ಮೋದಿ ಕರೆ ಮಾಡಿದ್ದಾರೆ

- ಟ್ರಂಪ್‌ ಕ್ರಮ ಪರಿಣಾಮ ಬೀರಿದೆ: ಮಾರ್ಕ್‌ ರುಟ್ಟೆ

- ರುಟ್ಟೆ ಹೇಳಿಕೆ ಸುಳ್ಳು ಮತ್ತು ಆಧಾರರಹಿತ: ಭಾರತ

PREV
Read more Articles on

Recommended Stories

75 ಲಕ್ಷ ಬಿಹಾರ ಸ್ತ್ರೀಯರಿಗೆ ತಲಾ ₹10,000 ಗ್ಯಾರಂಟಿ!
ತವರಲ್ಲಿ ವಿಶ್ವಕಪ್‌ ಗೆಲ್ಲಲು ಉತ್ಸುಕರಾಗಿದ್ದೇವೆ : ಹರ್ಮನ್‌