ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಅಡ್ಮಿರಲ್ ಹರಿಕುಮಾರ್ ನಿವೃತ್ತಿಯ ಹಿನ್ನೆಲೆಯಲ್ಲಿ ನೂತ ಮುಖ್ಯಸ್ಥರ ನೇಮಕ ಮಾಡಲಾಗಿದೆ.
ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ತ್ರಿಪಾಠಿ, ‘ನೌಕಾಪಡೆಯನ್ನು ಆತ್ಮನಿರ್ಭರತೆಯತ್ತ ಕೊಂಡೊಯ್ದು ವಿಕಸಿತ ಭಾರತವಾಗುವ ನಿಟ್ಟಿನಲ್ಲಿ ಆಮೂಲಾಗ್ರ ಕೊಡುಗೆ ನೀಡುವ ಗುರಿಯಿದೆ’ ಎಂದು ಹೇಳಿದರು.
ಮಧ್ಯಪ್ರಾಚ್ಯದ ಸಮುದ್ರಗಳಲ್ಲಿ ಹೌತಿಗಳ ಉಗ್ರಕೃತ್ಯ ತಡೆ, ಹಿಂದೂ ಮಹಾಸಾಗರದಲ್ಲಿ ಚೀನಾ ಪಾರಮ್ಯವನ್ನು ಹತ್ತಿಕ್ಕುವ ಸವಾಲು ತ್ರಿಪಾಠಿ ಅವರ ಮುಂದಿದೆ.