ಪಾಕ್‌ ರಾಜಕಾರಣಿಗಳಿಂದ ದುಬೈನಲ್ಲಿ ಲಕ್ಷ ಕೋಟಿ ಮೌಲ್ಯದ ಆಸ್ತಿ ಖರೀದಿ!

KannadaprabhaNewsNetwork |  
Published : May 16, 2024, 12:46 AM ISTUpdated : May 16, 2024, 07:12 AM IST
ಪ್ರಾಪರ್ಟಿ | Kannada Prabha

ಸಾರಾಂಶ

ದೇಶದ ಜನತೆ ತಿನ್ನಲು ಹಿಟ್ಟು, ಹಣ್ಣು, ಹಾಲು ಖರೀದಿ ಮಾಡಲಾಗದ ಸ್ಥಿತಿ ತಲುಪಿ ಸಂಕಷ್ಟದಲ್ಲಿದ್ದರೆ, ಪಾಕಿಸ್ತಾನದ ರಾಜಕಾರಣಿಗಳು, ವಂಚಕರು, ಅಪರಾಧ ಹಿನ್ನೆಲೆಯ ವ್ಯಕ್ತಿಗಳು ನೆರೆಯ ದುಬೈನಲ್ಲಿ ಭರ್ಜರಿ ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಖರೀದಿ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಇಸ್ಲಾಮಾಬಾದ್‌: ದೇಶದ ಜನತೆ ತಿನ್ನಲು ಹಿಟ್ಟು, ಹಣ್ಣು, ಹಾಲು ಖರೀದಿ ಮಾಡಲಾಗದ ಸ್ಥಿತಿ ತಲುಪಿ ಸಂಕಷ್ಟದಲ್ಲಿದ್ದರೆ, ಪಾಕಿಸ್ತಾನದ ರಾಜಕಾರಣಿಗಳು, ವಂಚಕರು, ಅಪರಾಧ ಹಿನ್ನೆಲೆಯ ವ್ಯಕ್ತಿಗಳು ನೆರೆಯ ದುಬೈನಲ್ಲಿ ಭರ್ಜರಿ ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಖರೀದಿ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಂತಾರಾಷ್ಟ್ರೀಯ ಅಪರಾಧ ಮತ್ತು ಸಂಘರ್ಷಗಳ ಕುರಿತು ಅಧ್ಯಯನ ನಡೆಸುವ ಅಮೆರಿಕ ಮೂಲದ ‘ದ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ ಡಿಫೆನ್ಸ್‌ ಸ್ಟಡೀಸ್‌’ ಎಂಬ ಸರ್ಕಾರೇತರ ಸಂಘಟನೆಯೊಂದು ಸಿದ್ಧಪಡಿಸಿರುವ ‘ದುಬೈ ಅನ್‌ಲಾಕ್‌’ ಎಂಬ ವರದಿ ದಿವಾಳಿ ಹಂತದಲ್ಲಿರುವ ಪಾಕಿಸ್ತಾನದ ಭ್ರಷ್ಟ ರಾಜಕಾರಣಿಗಳ ಬಣ್ಣ ಬಯಲು ಮಾಡಿದೆ. ಪಾಕ್‌ ಜೊತೆಗೆ ದುಬೈನಲ್ಲಿ ಆಸ್ತಿ ಖರೀದಿ ಮಾಡಿರುವ ಇತರೆ ಹಲವು ಜನರ ಹೆಸರೂ ಪಟ್ಟಿಯಲ್ಲಿದೆ.

ಅಕ್ರಮವಾಗಿ ಸಂಪಾದಿಸಿದ ಹಣವನ್ನು ಹೇಗೆ ರಾಜಕಾರಣಿಗಳು, ಉದ್ಯಮಿಗಳು, ದುಬೈನಲ್ಲಿ ಖರೀದಿಗೆ ಬಳಸಿಕೊಂಡಿದ್ದಾರೆ ಎಂಬುದರ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ 58 ದೇಶಗಳ 70ಕ್ಕೂ ಹೆಚ್ಚು ಸಂಸ್ಥೆಗಳು ಒಂದುಗೂಡಿ ಈ ವರದಿ ತಯಾರಿಸಿವೆ.

ವರದಿ ಅನ್ವಯ ಪಾಕಿಸ್ತಾನದ 17000 ಶತಕೋಟ್ಯಾಧೀಶರು, ದುಬೈನಲ್ಲಿ 23000 ಮನೆಗಳನ್ನು ಖರೀದಿ ಮಾಡಿದ್ದಾರೆ. ಇದರ ಅಂದಾಜು ಮೊತ್ತ 1 ಲಕ್ಷ ಕೋಟಿ ರು.ಗಳು. ಇದರಲ್ಲಿ ಪಾಕಿಸ್ತಾನದ ಎಲ್ಲಾ ಹಾಲಿ ಪ್ರಮುಖ ರಾಜಕಾರಣಿಗಳು, ಅವರ ಕುಟುಂಬ ಸದಸ್ಯರು, ಸೇನೆಯ ಹಿರಿಯ ಅಧಿಕಾರಿಗಳು, ಸೇನೆಯ ನಿವೃತ್ತ ಅಧಿಕಾರಿಗಳು, ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ವಿಜ್ಞಾನಿಗಳು, ಪೊಲೀಸರು, ರಾಜತಾಂತ್ರಿಕರು, ಅಮೆರಿಕ ಸೇರಿದಂತೆ ಇತರೆ ಕೆಲ ದೇಶಗಳಿಂದ ನಾನಾ ರೀತಿಯ ನಿರ್ಬಂಧಕ್ಕೆ ಒಳಗಾಗಿರುವವರು ಸೇರಿದ್ದಾರೆ.

ವಿಶೇಷವೆಂದರೆ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿಗೆ ಈ ವಿದೇಶಿ ಆಸ್ತಿಯನ್ನು 2014ರಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !