12 ರಾಜ್ಯಗಳಲ್ಲಿ ಎಸ್‌ಐಆರ್‌ ಗಡುವು 1 ವಾರ ವಿಸ್ತರಣೆ

KannadaprabhaNewsNetwork |  
Published : Dec 01, 2025, 01:45 AM IST
SIR

ಸಾರಾಂಶ

ದೇಶದ 9 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ (ಎಸ್ಐಆರ್‌) ವೇಳಾಪಟ್ಟಿಯನ್ನು 1 ವಾರ ಕಾಲ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.

ನವದೆಹಲಿ: ದೇಶದ 9 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ (ಎಸ್ಐಆರ್‌) ವೇಳಾಪಟ್ಟಿಯನ್ನು 1 ವಾರ ಕಾಲ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ. 

ಇದೀಗ ಡಿ.11ರ ತನಕ ಮುಂದೂಡಿಕೆ

ಆಯೋಗ ಈ ಹಿಂದೆ ನೀಡಿದ ಆದೇಶದ ಪ್ರಕಾರ ಡಿ.4ಕ್ಕೆ ಈ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ ಅದನ್ನು ಇದೀಗ ಡಿ.11ರ ತನಕ ಮುಂದೂಡಿಕೆ ಮಾಡಿದೆ. ಈ ಪ್ರಕಾರ ವಿಶೇಷ ಮತಪಟ್ಟಿಯ ಕರಡುಪಟ್ಟಿಯು ಡಿ.9ರ ಬದಲು 16ಕ್ಕೆ ಪ್ರಕಟವಾಗಲಿದೆ. ಅಂತಿಮ ಮತದಾರ ಪಟ್ಟಿಯು ಮುಂದಿನ ವರ್ಷದ ಫೆಬ್ರವರಿ 14ಕ್ಕೆ ಪ್ರಕಟವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ‘ಪರಿಷ್ಕರಣೆಯನ್ನು ಗಡಿಬಿಡಿ ಮಾಡಿ ಮುಗಿಸಲಾಗದು ಎಂದು ಚುನಾವಣಾ ಆಯೋಗಕ್ಕೆ ಈಗ ಅರಿವಾದಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಮತಪಟ್ಟಿ ಪರಿಷ್ಕರಣೆ ಒತ್ತಡ?: ಮತ್ತಿಬ್ಬರು ಬಿಎಲ್‌ಒಗಳು ಸಾವು 

ಜೈಪುರ: ದೇಶದಲ್ಲಿ ಬಿಎಲ್‌ಒಗಳ (ಬೂತ್‌ ಮಟ್ಟದ ಅಧಿಕಾರಿ) ಸಾವಿನ ಸರಣಿ ಮುಂದುವರಿದಿದೆ. ರಾಜಸ್ಥಾನದಲ್ಲಿ ಓರ್ವ ಬಿಎಲ್‌ಒ ಕುಸಿದು ಬಿದ್ದು ಸಾವನ್ನಪ್ಪಿದರೆ, ಉತ್ತರ ಪ್ರದೇಶದಲ್ಲಿ ಒಬ್ಬ ಬಿಎಲ್‌ಒ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಎಸ್‌ಐಆರ್‌ ವೇಳೆ ಮೃತಪಟ್ಟ ಸಿಬ್ಬಂದಿ ಸಂಖ್ಯೆ 14ಕ್ಕೇರಿಕೆಯಾಗಿದೆ.

ರಾಜಸ್ಥಾನದ ಧೋಲ್ಪುರದಲ್ಲಿ ಬಿಎಲ್ಒ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಅನುಜ್‌ ಗರ್ಗ್‌ ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿಯೇ ಮತಪಟ್ಟಿ ಪರಿಷ್ಕರಣೆ ಡೇಟಾ ಅಪ್ಲೋಡ್‌ ಮಾಡುತ್ತಿದ್ದರು. ಈ ವೇಳೆ ಇದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ‘ಅನುಜ್‌ ಕೆಲಸದೊತ್ತಡದಿಂದ ಬಳಲುತ್ತಿದ್ದರು. ತಡರಾತ್ರಿಯವರೆಗೂ ಎಸ್‌ಐಆರ್‌ ಕೆಲಸ ಮಾಡುತ್ತಿದ್ದರು’ ಎಂದು ಕುಟುಂಬಸ್ಥರು ದೂಷಿಸಿದ್ದಾರೆ.ಇನ್ನು ‘ಮತಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡ ತಾಳಲಾಗುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ಸಹಾಯಕ ಶಿಕ್ಷಕ ಸರ್ವೇಶ್ ಸಿಂಗ್ (46) ಮೊರಾದಾಬಾದ್‌ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ!
ವಸಾಹತುಶಾಹಿ ಗುರುತು ಅಳಿಸಿ ಹಾಕಲು ರಾಜಭವನ ಇನ್ನು ಲೋಕಭವನ