ಕೇಜ್ರಿ ಚುನಾವಣಾ ಪ್ರಚಾರ ಹಕ್ಕು ಸಾಂವಿಧಾನಿಕವಲ್ಲ: ಸುಪ್ರೀಂನಲ್ಲಿ ಇ.ಡಿ ವಾದ

KannadaprabhaNewsNetwork |  
Published : May 10, 2024, 01:33 AM ISTUpdated : May 10, 2024, 07:19 AM IST
kejriwal news 102.jpg

ಸಾರಾಂಶ

ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು ನಿರಾಕರಿಸಬೇಕು. ಚುನಾವಣಾ ಪ್ರಚಾರ ಹಕ್ಕು ಮೂಲಭೂತ ಹಾಗೂ ಸಾಂವಿಧಾನಿಕವಲ್ಲ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನವದೆಹಲಿ: ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು ನಿರಾಕರಿಸಬೇಕು. ಚುನಾವಣಾ ಪ್ರಚಾರ ಹಕ್ಕು ಮೂಲಭೂತ ಹಾಗೂ ಸಾಂವಿಧಾನಿಕವಲ್ಲ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಬೇಕು ಎಂದು ಜಾರಿ ನಿರ್ದೇಶನಾಲಯ 44 ಪುಟಗಳ ಅಫಿಡವಿಟ್‌ ಸಲ್ಲಿಸಿದೆ. ಈ ಅಫಿಡವಿಟ್‌ನಲ್ಲಿ,‘ಚುನಾವಣಾ ಪ್ರಚಾರ ಸಾಂವಿಧಾನಿಕ ಅಥವ ಮೂಲಭೂತ ಹಕ್ಕಲ್ಲ. ಹಿಂದೆ ನಡೆದ ಘಟನೆಗಳನ್ನು ಅವಲೋಕಿಸಿದರೆ, ನ್ಯಾಯಾಂಗ ಬಂಧನದಲ್ಲಿರುವ ಯಾವುದೇ ರಾಜಕಾರಣಿಗಳಿಗೂ ಜಾಮೀನು ನೀಡಿಲ್ಲ. 

ಒಂದು ವೇಳೆ ಜಾಮೀನು ನೀಡಿದರೆ, ಜೈಲಿನಲ್ಲಿರುವ ಮಿಕ್ಕ ರಾಜಕಾರಣಿಗಳು ಜಾಮೀನು ಕೇಳುವುದಿಲ್ಲ ಎಂದು ಹೇಗೆ ಹೇಳಬಹುದು’ ಎಂದು ಪ್ರಶ್ನಿಸಿದೆ.ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ. ಕೇಜ್ರಿವಾಲ್‌ ಅವರನ್ನು ಮಾ.21ರಂದು ಬಂಧಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಧ್ಯಪ್ರಾಚ್ಯ ಬಿಕ್ಕಟ್ಟು ಹಿನ್ನೆಲೆಒಣಹಣ್ಣು ಬೆಲೆ 40% ಹೆಚ್ಚಳ!
ಮೊಜ್ತಬಾ ಸೇರಿ ಇರಾನ್‌ನ 10 ನಾಯಕರ ಮಾಹಿತಿ ಕೊಟ್ರೆ ₹92 ಕೋಟಿ ಬಹುಮಾನ!