ಪೇಟಿಎಂಗೆ ಇ.ಡಿ. ಬಿಸಿ: ಅಕ್ರಮ ಹಣ ವರ್ಗ ಬಗ್ಗೆ ತನಿಖೆ ಸಾಧ್ಯತೆ

KannadaprabhaNewsNetwork |  
Published : Feb 04, 2024, 01:30 AM ISTUpdated : Feb 04, 2024, 08:52 AM IST
ಪೇಟಿಎಂ | Kannada Prabha

ಸಾರಾಂಶ

ಸೈಫೋನಿಂಗ್‌ ಕುರಿತು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದಾಗಿ ಕಮದಾಯ ಇಲಾಖೆ ಕಾರ್ಯದರ್ಶಿ ಸಂಜಯ್‌ ಮಲ್ಹೊತ್ರಾ ತಿಳಿಸಿದ್ದಾರೆ.

ನವದೆಹಲಿ: ಆರ್‌ಬಿಐನಿಂದ ಹಲವು ನಿರ್ಬಂಧಕ್ಕೆ ಒಳಗಾಗಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಶನಿವಾರ ಮತ್ತೊಂದು ಆಘಾತವಾಗಿದೆ. ಪೇಮೆಂಟ್ಸ್‌ ಬ್ಯಾಂಕ್‌ ವಿದೇಶಗಳಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದೇ ಅದರ ಮೇಲಿನ ನಿರ್ಬಂಧಕ್ಕೆ ಕಾರಣೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ರಾಯಿಟರ್ಸ್‌ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ, ‘ಅಕ್ರಮ ಹಣ ವರ್ಗ ನಡೆದಿದ್ದ ಪಕ್ಷದಲ್ಲಿ, ಆ ಕುರಿತು ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

‘ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಫೆ.29ರ ಬಳಿಕ ಯಾವುದೇ ಹೊಸ ಹೂಡಿಕೆಗಳನ್ನು ಸ್ವೀಕರಿಸದಂತೆ ಸೂಚಿಸಲಾಗಿದೆ. ಆದಾಗ್ಯೂ ಬ್ಯಾಂಕ್‌ ವತಿಯಿಂದ ಹಣದ ಅಕ್ರಮ ವರ್ಗ ನಡೆದರೆ ಇಡಿಯಿಂದ ತನಿಖೆ ನಡೆಸಿ ಕಾನೂನು ರೀತ್ಯಾ ಇ.ಡಿ. ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ಸೈಫೋನಿಂಗ್‌ ಕುರಿತು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದಾಗಿ ಕಮದಾಯ ಇಲಾಖೆ ಕಾರ್ಯದರ್ಶಿ ಸಂಜಯ್‌ ಮಲ್ಹೊತ್ರಾ ತಿಳಿಸಿದ್ದಾರೆ.

PREV

Recommended Stories

ಕೆಬಿಸಿ: ₹25 ಲಕ್ಷ ಗೆದ್ದ ಕ। ಖುರೇಶಿ, ವಿಂಗ್‌ ಕ। ವ್ಯೋಮಿಕಾ, ಕ। ಪ್ರೇರಣಾ
ಮುಸ್ಲಿಮೇತರರಿಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನ: ಉ.ಖಂಡ ಕಾಯ್ದೆ