ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

KannadaprabhaNewsNetwork |  
Published : Jan 14, 2026, 03:00 AM IST
Sabarimala

ಸಾರಾಂಶ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಮಕರಜ್ಯೋತಿಯು ಬುಧವಾರ ದರ್ಶನವಾಗಲಿದೆ. ಈ ಬಾರಿ ಸಂಕ್ರಾಂತಿಯು 14ರ ಮಧ್ಯಾಹ್ನದಿಂದಲೇ ಆರಂಭವಾಗುವ ಕಾರಣ 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

ಪಟ್ಟಣಂತಿಟ್ಟ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಮಕರಜ್ಯೋತಿಯು ಬುಧವಾರ ದರ್ಶನವಾಗಲಿದೆ. ಈ ಬಾರಿ ಸಂಕ್ರಾಂತಿಯು 14ರ ಮಧ್ಯಾಹ್ನದಿಂದಲೇ ಆರಂಭವಾಗುವ ಕಾರಣ 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

ಟಿಕೆಟ್‌ ಹೊಂದಿರುವವರಿಗೆ ಮಾತ್ರವೇ ದೇಗುಲ ಪ್ರವೇಶ

ಭಕ್ತರ ಸಂಖ್ಯೆಗೆ ಈ ಬಾರಿ ಮಿತಿ ಹೇರಲಾಗಿದ್ದು, 30,000 ಆನ್ಲೈನ್‌ ಮತ್ತು 5000 ಕೌಂಟರ್‌ ಟಿಕೆಟ್‌ ಹೊಂದಿರುವವರಿಗೆ ಮಾತ್ರವೇ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಭಕ್ತರ ಭದ್ರತೆಗಾಗಿ 2000 ಪೊಲೀಸ್‌ ಸಿಬ್ಬಂದಿ

ಭಕ್ತರ ಭದ್ರತೆಗಾಗಿ 2000 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದ್ದು, ಇವರೊಂದಿಗೆ 136 ಸ್ವಯಂಸೇವಕರು, 31 ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

10 ಮಿನಿಟ್ಸ್‌ ಡೆಲಿವರಿ ಇನ್ನು ನಿಮಗೆ ಸಿಗಲ್ಲ!
ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ : ಸುಪ್ರೀಂ