ವೃದ್ಧರು, ಅಂಗವಿಕಲರಿಗೆ ಮನೆಯಿಂದಲೇ ಮತಕ್ಕೆ ಅವಕಾಶ

KannadaprabhaNewsNetwork |  
Published : Mar 17, 2024, 01:48 AM ISTUpdated : Mar 17, 2024, 07:54 AM IST
ವೃದ್ಧರು | Kannada Prabha

ಸಾರಾಂಶ

88 ಲಕ್ಷ ಅಂಗವಿಕಲರು, 82 ಲಕ್ಷ ವೃದ್ಧರು ಮತದಾರರ ಪಟ್ಟಿಯಲ್ಲಿದ್ದು ಅವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 2.18 ಲಕ್ಷ ಶತಾಯುಷಿಗಳು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ 88.4 ಲಕ್ಷ ವಿಕಲಚೇತನರು ಹಾಗೂ 85 ವರ್ಷ ಮೇಲ್ಪಟ್ಟ 82 ಲಕ್ಷ ವೃದ್ಧ ಮತದಾರರು ಮತದಾನಕ್ಕೆ ಅರ್ಹರಾಗಿದ್ದು, ಅವರೆಲ್ಲರಿಗೂ ಅಗತ್ಯಬಿದ್ದಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.

ಮತದಾನಕ್ಕೆ ಮನೆಯಿಂದಲೇ ಮತ ಚಲಾಯಿಸಬೇಕೆನ್ನುವ ಅಂಗವಿಕಲರು ಮೊದಲೇ ಚುನಾವಣಾ ಆಯೋಗಕ್ಕೆ ಈ ಕುರಿತು ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಶೇ.40 ಮತ್ತು ಅದಕ್ಕಿಂತ ಹೆಚ್ಚು ವಿಕಲತೆ ಹೊಂದಿರುವವರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುತ್ತದೆ. 

ಅಲ್ಲದೆ ಅವರು ಇಚ್ಛೆ ಪಟ್ಟಲ್ಲಿ ಮತಕೇಂದ್ರಗಳಿಗೂ ಬಂದು ಮತ ಚಲಾಯಿಸಬಹುದು. ಅದಕ್ಕಾಗಿ ಅವರಿಗೆ ಗಾಲಿ ಕುರ್ಚಿ ಮತ್ತು ರ್‍ಯಾಂಪ್‌ ಸೌಕರ್ಯ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. 

85 ವರ್ಷ ಮೇಲ್ಪಟ್ಟವರಿಗೂ ಅವಕಾಶ: ಪ್ರಸ್ತುತ ಮತದಾರರ ಪಟ್ಟಿಯಲ್ಲಿ 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರಿದ್ದು, ಅವರಿಗೂ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 2.18 ಲಕ್ಷ ಶತಾಯುಷಿಗಳಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ