ಮಮ್ದಾನಿ ತಾಯಿ ಮೀರಾ ನಾಯರ್, ಅನಿಲ್ ಅಂಬಾನಿ ಹೆಸರೂ ಉಲ್ಲೇಖ
----
ಬಾಲಕಿಯರೊಂದಿಗೆ ಟ್ರಂಪ್ ಮುಖಮೈಥುನಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್ ತಮ್ಮ ಮಾರ್ಲಾ ಗೋ ಎಸ್ಟೇಟ್‌ನಲ್ಲಿ ಆಯೋಜಿಸುತ್ತಿದ್ದ ಐಷಾರಾಮಿ ಪಾರ್ಟಿಗಳಲ್ಲಿ ಉದ್ಯಮಿ ಎಲಾನ್ ಮಸ್ಕ್, ಟ್ರಂಪ್‌ರ ಮಕ್ಕಳಾದ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಮತ್ತು ಇವಾಂಕಾ ಟ್ರಂಪ್ ಭಾಗವಹಿಸಿದ್ದ ಅಂಶಗಳಿವೆ. ಜೊತೆಗೆ 13-14 ವರ್ಷದ ವಯಸ್ಸಿನವ ಬಾಲಕಿಯರ ಜೊತೆಗೆ ಟ್ರಂಪ್ ಮುಖಮೈಥುನ ನಡೆಸಿದ ಹಾಗೂ ಟ್ರಂಪ್‌ಗೆ ಆ ಬಾಲಕಿಯರು ಕಚ್ಚಿದ ಅಸಹ್ಯಕರ ಅಂಶಗಳು ಕೂಡಾ ಇವೆ. ಅಲ್ಲದೆ ತಮ್ಮನ್ನು ಎಪ್‌ಸ್ಟೀನ್ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ವಿಷಯವನ್ನೂ ಬಾಲಕಿಯರು ಹಂಚಿಕೊಂಡಿದ್ದಾರೆ.
ರಷ್ಯನ್ ಜೊತೆಗೆ ಸೆಕ್ಸ್‌ನಿಂದ ಗೇಟ್ಸ್‌ಗೆ ಲೈಂಗಿಕ ವ್ಯಾಧಿ!
---
ಎಪ್‌ಸ್ಟೀನ್ ಕಡತಗಳಲ್ಲಿ ಬ್ರಿಟನ್ ರಾಜಕುವರ ಪ್ರಿನ್ಸ್ ಆ್ಯಂಡ್ರೂ ರಾಸಲೀಲೆ ನಡೆಸುತ್ತಿರುವ ಫೋಟೋ ಇವೆ.
--
ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರೂ ಸಹ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ತಳುಕಾಡಿದೆ. ಮೇ 23, 2019ರಂದು ಅನಿಲ್ ಅವರು ಎಪ್‌ಸ್ಟೀನ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂಬ ಇ-ಮೇಲ್ ಎಪ್‌ಸ್ಟೀನ್ ಫೈಲ್‌ನಲ್ಲಿದೆ.
ಟ್ರಂಪ್ ಹೇಳಿದಂತೆ ಮೋದಿ ಕುಣಿತ: ಎಪ್‌ಸ್ಟೀನ್ ಫೈಲ್ಸ್
ನವದೆಹಲಿ: ಶುಕ್ರವಾರ ಬಹಿರಂಗವಾದ ಅಮೆರಿಕದ ಲೈಂಗಿಕ ಅಪರಾಧಿ ಎಪ್‌ಸ್ಟೀನ್‌ನ 3 ಲಕ್ಷ ಪುಟದ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2017ರ ಇಸ್ರೇಲ್ ಭೇಟಿ ನಮೂದಾಗಿದೆ.ಕಡತಗಳಲ್ಲಿನ ಒಂದು ಎಪ್‌ಸ್ಟೀನ್‌ನ ಇ-ಮೇಲ್‌ನಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮಾರ್ಗದರ್ಶನದ ಪ್ರಕಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು.. ಅಮೆರಿಕ ಅಧ್ಯಕ್ಷರ ಲಾಭಕ್ಕಾಗಿ ಇಸ್ರೇಲ್‌ನಲ್ಲಿ ಕುಣಿದರು ಮತ್ತು ಹಾಡಿದರು. ಕೆಲವು ದಿನದ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಇದು ಕೆಲಸ ಮಾಡಿದೆ’ ಎಂದು ಬರೆಯಲಾಗಿದೆ.ಇದನ್ನು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದು, ‘ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿದೆ. ಲೈಂಗಿಕ ಅಪರಾಧಿಯೊಬ್ಬನ ಮಾರ್ಗದರ್ಶನದಂತೆ ಇಸ್ರೇಲ್‌ಗೆ ಹೋಗಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.--
ಎಪ್‌ಸ್ಟೀನ್ ಕಡತದಲ್ಲಿನ ಆರೋಪ ಸುಳ್ಳು: ಭಾರತನವದೆಹಲಿ: ಎಪ್‌ಸ್ಟೀನ್ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿರುವ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು, ‘ಇದು ಸುಳ್ಳಿನ ಕಂತೆ’ ಎಂದಿದೆ.
ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ಬಿಡುಗಡೆ ಮಾಡಿದ್ದು, ‘ಮೋದಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿರುವ ಇಮೇಲ್ ಸಂದೇಶದ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017ರಲ್ಲಿ ಪ್ರಧಾನಿಯವರ ಇಸ್ರೇಲ್ ಅಧಿಕೃತ ಭೇಟಿ ಬಗ್ಗೆ ಇರುವ ಮಾಹಿತಿ ವಾಸ್ತವ ಮೀರಿದ್ದಾಗಿದೆ. ಇಮೇಲ್‌ನಲ್ಲಿರುವ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬನ ವ್ಯರ್ಥ ಆಲೋಚನೆಗಳಷ್ಟೇ ಆಗಿವೆ. ಇದು ತಿರಸ್ಕಾರಕ್ಕೆ ಅರ್ಹವಾಗಿದೆ’ ಎಂದಿದೆ.