ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳಿಗೆ ಹಿನ್ನಡೆ

KannadaprabhaNewsNetwork |  
Published : Dec 10, 2024, 12:34 AM ISTUpdated : Dec 10, 2024, 07:46 AM IST
ಇವಿಎಂ | Kannada Prabha

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ)ದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳಿಗೆ ಹಿನ್ನಡೆ ಆಗಿದೆ.  

 ಸಂಭಾಜಿನಗರ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ)ದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳಿಗೆ ಹಿನ್ನಡೆ ಆಗಿದೆ. ನಾಂದೇಡ್‌ನಲ್ಲಿ ಜಿಲ್ಲಾಡಳಿತವು 75 ವಿವಿಪ್ಯಾಟ್ ಯಂತ್ರಗಳನ್ನು ಇವಿಎಂಗಳಲ್ಲಿನ ಮತಗಳೊಂದಿಗೆ ಪರಿಶೀಲಿಸಿದ್ದು, ಲೆಕ್ಕದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಸೂಚನೆ ಮೇರೆಗೆ ಮತ ಎಣಿಕೆ ಹಾಗೂ ಪರಿಶೀಲನೆ ಕಾರ್ಯ ನಡೆದಿದೆ. ನಿಯಮಾನುಸಾರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಕೇಂದ್ರಗಳಿಂದ ಅಭ್ಯರ್ಥಿಗಳ ಮತಗಳನ್ನು ಇವಿಎಂಗಳಲ್ಲಿ ಪಡೆದಿದ್ದು, ಅವುಗಳನ್ನು ವಿವಿಪ್ಯಾಟ್‌ಗಳೊಂದಿಗೆ ತಾಳೆ ಮಾಡಲಾಗಿದೆ ಎಂದಿದ್ದಾರೆ.

ನಾಂದೇಡ್‌ನಲ್ಲಿ ವಿಧಾನಸಭೆ ಚುನಾವಣೆ ಜತೆ ಲೋಕಸಭೆ ಉಪಚುನಾವಣೆಯೂ ನಡೆದಿತ್ತು. ಜಿಲ್ಲೆಯ 75 ಕೇಂದ್ರಗಳಲ್ಲಿನ ವಿವಿಪ್ಯಾಟ್‌ ಯಂತ್ರಗಳನ್ನು ಪರಿಶೀಲಿಸಲಾಗಿದ್ದು, ಇವುಗಳಲ್ಲಿ 30 ಲೋಕಸಭೆ ಮತ್ತು 45 ವಿಧಾನಸಭೆ ಇವಿಎಂಗಳ ಸೇರಿವೆ. ಎಲ್ಲದರಲ್ಲಿನ ಎಣಿಕೆ ದೋಷರಹಿತವಾಗಿದೆ ಎಂದು ನಾಂದೇಡ್ ಜಿಲ್ಲಾಧಿಕಾರಿ ಅಭಿಜಿತ್ ರಾವುತ್ ಹೇಳಿದ್ದಾರೆ.

ಅಭ್ಯರ್ಥಿಗಳ ಪ್ರತಿನಿಧಿಗಳು ಮತ್ತು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಕೇಂದ್ರಗಳನ್ನು ಆಯ್ಕೆ ಮಾಡಲಾಯಿತು. ಎಣಿಕೆಯ ಸಮಯದಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ವಿವಿಪ್ಯಾಟ್‌ಗಳ ಸ್ಲಿಪ್‌ಗಳನ್ನು ಭೌತಿಕವಾಗಿ ಎಣಿಸಲಾಗಿದೆ ಮತ್ತು ಇವಿಎಂಗಳಿಂದ ಮತಗಳೊಂದಿಗೆ ಪರಿಶೀಲಿಸಲಾಗಿದೆ.

ವಿಧಾನಸಭೆ ಚುನಾವಣೆಗೆ 45 ಮತಗಟ್ಟೆಗಳು ಮತ್ತು ಲೋಕಸಭೆ ಉಪಚುನಾವಣೆಗೆ 30 (ಲೋಕಸಭಾ ಕ್ಷೇತ್ರ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಲ್ಲಿನ ತಲಾ 5) ಮತಗಟ್ಟೆಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ