ನವದೆಹಲಿ: ‘ದಿಲೀಪ್ ಕುಮಾರ್ ಆಗಿ ಹುಟ್ಟಿದ್ದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಇಸ್ಲಾಂಗೆ ಮತಾಂತರ ಆಗಲು ನೆರವಾಗಿದ್ದ ಕಲುಬುರ್ಗಿಯ ಫಕೀರರು‘ ಎಂದು ರೆಹಮಾನ್‌ರ ಆಪ್ತ ರಾಜೀವ್ ಮೆನನ್ ಹೇಳಿದ್ದಾರೆ.
ಜೊತೆಗೆ ರೆಹಮಾನ್, ಕೌಟುಂಬಿಕವಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು. ಅದರಲ್ಲಿಯೂ ಹೆಚ್ಚಾಗಿ ಸಹೋದರಿಯರ ಮದುವೆ ವಿಚಾರವಾಗಿ ಒತ್ತಡದಲ್ಲಿದ್ದರು’ ಎಂದು ರಾಜೀವ್ ಮೆನನ್ ಹೇಳಿದ್ದಾರೆ. ಈ ಹಿಂದೆ ರೆಹಮಾನ್ ಸಂದರ್ಶನವೊಂದರಲ್ಲಿ ತಮ್ಮ ಮತಾಂತರದ ಬಗ್ಗೆ ಮಾತನಾಡಿದ್ದರು. ‘ ತಂದೆಯ ಮರಣದ ನಂತರ ಕುಟುಂಬ ಆರ್ಥಿಕ ಒತ್ತಡಕ್ಕೆ ಸಿಲುಕಿತ್ತು. ದೇವರ ಮೇಲೆ ನಂಬಿಕೆಯುಳ್ಳ ನನ್ನ ತಾಯಿ ಕರಿಮುಲ್ಲಾ ಶಾ ಖಾದ್ರಿ ಎನ್ನುವ ಸೂಫಿ ಸಂತರನ್ನು ಭೇಟಿಯಾಗಿದ್ದರು. ಇಸ್ಲಾಂ ಧರ್ಮವನ್ನು ಆರಿಸಿಕೊಳ್ಳಲು ನನಗೆ ಯಾರೂ ಬಲವಂತ ಮಾಡಿ ಇರಲಿಲ್ಲ. ಖಾದ್ರಿ ಭೇಟಿಯಾದ ಬಳಿಕ ಅವರ ಮಾತುಗಳಿಂದ ಪ್ರೇರಿತನಾಗಿ ಸೂಫಿ ಅತ್ಯುತ್ತಮ ಆಯ್ಕೆ ಎಂದು ಇಸ್ಲಾಂ ಆಯ್ಕೆ ಮಾಡಿಕೊಂಡೆ’ ಎಂದಿದ್ದರು.