ಚೆಸ್‌ ವಿಶ್ವಕಪ್‌ ಫೈನಲ್‌ಗೆ ಅಂತಾರಾಷ್ಟ್ರೀಯ ಮಾಸ್ಟರ್‌ ದಿವ್ಯಾ

KannadaprabhaNewsNetwork |  
Published : Jul 24, 2025, 01:45 AM ISTUpdated : Jul 24, 2025, 04:17 AM IST
ದಿವ್ಯಾ | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಾಸ್ಟರ್‌ ದಿವ್ಯಾ ದೇಶ್‌ಮುಖ್‌ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ನ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಝಾಂಗ್‌ಯೀ ಟಾನ್‌ ವಿರುದ್ಧ 1.5-0.5 ಅಂಕಗಳಲ್ಲಿ ಗೆಲುವು ಸಾಧಿಸಿದರು. 

  ಬಟುಮಿ (ಜಾರ್ಜಿಯಾ): ಅಂತಾರಾಷ್ಟ್ರೀಯ ಮಾಸ್ಟರ್‌ ದಿವ್ಯಾ ದೇಶ್‌ಮುಖ್‌ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ನ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಝಾಂಗ್‌ಯೀ ಟಾನ್‌ ವಿರುದ್ಧ 1.5-0.5 ಅಂಕಗಳಲ್ಲಿ ಗೆಲುವು ಸಾಧಿಸಿದರು. ಇವರಿಬ್ಬರ ನಡುವಿನ ಮೊದಲ ಸುತ್ತು ಡ್ರಾಗೊಂಡಿತ್ತು.

ದಿವ್ಯಾ ಮಹಿಳಾ ಚೆಸ್‌ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೇ, 2026ರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕ್ಯಾಂಡಿಡೇಟ್ಸ್‌ನಲ್ಲಿ ಗೆಲ್ಲುವ ಆಟಗಾರ್ತಿ ಮುಂದಿನ ವರ್ಷ ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಚೀನಾದ ವೆನ್ಜುನ್‌ ಜು ವಿರುದ್ಧ ಸೆಣಸಲಿದ್ದಾರೆ.

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುತ್ತಿರುವ ಈ ಮೊದಲು 2ನೇ ಶ್ರೇಯಾಂಕಿತೆ ಚೀನಾದ ಝೋನರ್‌ ಜು ವಿರುದ್ಧ ಗೆದ್ದಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಹರಿಕಾ ದ್ರೋಣವಳ್ಳಿ ಅವರನ್ನು ಮಣಿಸಿದರು.

ಸೆಮಿಫೈನಲ್‌ ಭಾರೀ ಪೈಪೋಟಿಯಿಂದ ಕೂಡಿತ್ತು. ಮೊದಲ ಸುತ್ತಿನಲ್ಲಿ ಸಮಬಲ ಸಾಧಿಸಿದ್ದ ಉಭಯ ಆಟಗಾರ್ತಿಯರು, ಈ ಸುತ್ತಿನಲ್ಲೇ ಫಲಿತಾಂಶ ಕಾಣಲು ಸೆಣಸಿದರು. ಪಂದ್ಯವು ಬರೋಬ್ಬರಿ 101 ನಡೆಗಳಿಗೆ ಸಾಕ್ಷಿಯಾಯಿತು. ಕೊನೆರು-ಲೀ ಸೆಮೀಸ್‌

ಸೆಣಸಾಟ ಟೈ ಬ್ರೇಕರ್‌ಗೆ

ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವೆ ನಡೆಯುತ್ತಿರುವ 2ನೇ ಸೆಮಿಫೈನಲ್‌ ಟೈ ಬ್ರೇಕರ್‌ಗೆ ಸಾಗಿದೆ. ಇಬ್ಬರ ನಡುವಿನ 2ನೇ ಸುತ್ತು ಸಹ ಡ್ರಾನಲ್ಲಿ ಕೊನೆಗೊಂಡಿತು. ಈ ಇಬ್ಬರು ಟೈ ಬ್ರೇಕರ್‌ನಲ್ಲಿ ರ್‍ಯಾಪಿಡ್‌ ಚೆಸ್‌ ಮಾದರಿಯಲ್ಲಿ ಆಡಲಿದ್ದಾರೆ. ಗೆಲ್ಲುವ ಆಟಗಾರ್ತಿ ಫೈನಲ್‌ಗೇರಲಿದ್ದು, ಸೋಲುವವರು 3ನೇ ಸುತ್ತಿಗಾಗಿ ಸೆಣಸಲಿದ್ದಾರೆ. ಫೈನಲ್‌ ಜು.27ರಿಂದ ಆರಂಭಗೊಳ್ಳಲಿದೆ.

PREV
Read more Articles on

Recommended Stories

ಬಿಹಾರ: 65.2 ಲಕ್ಷ ಅನರ್ಹ ಮತದಾರರು ಪತ್ತೆ
ರಾಜ್ಯದಲ್ಲಿ ಯೂರಿಯಾ ಕಿಚ್ಚು- ಗೊಬ್ಬರಕ್ಕೆ ರಾತ್ರಿ ಇಡೀ ಕ್ಯೂ । ಆದರೂ ಸಿಗುತ್ತಿಲ್ಲ ಗೊಬ್ಬರ