;Resize=(412,232))
ತಿರುವನಂತಪುರಂ: ವಯನಾಡು ಜಿಲ್ಲೆಯಲ್ಲಿ ಆಸ್ತಿಪಾಸ್ತಿ, ತಮ್ಮವರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ಇದೀಗ ಇನ್ನೊಂದು ವಿಪತ್ತು ಎದುರಾಗಿದೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ, ತಕ್ಷಣವೇ ಹಣ ಪಾವತಿ ಮಾಡುವಂತೆ ದೂರವಾಣಿ ಕರೆ ಮಾಡಲಾಗುತ್ತಿದೆ.
ಇದು ಸಂತ್ರಸ್ತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.ಈ ನಡುವೆ ಹಣಕಾಸು ಸಂಸ್ಥೆಗಳ ಈ ವರ್ತನೆ ಬಗ್ಗೆ ಕಿಡಿಕಾರಿರುವ ಲೋಕೋಪಯೋಗಿ ಖಾತೆ ಸಚಿವ ಮೊಹಮ್ಮದ್ ರಿಯಾಜ್, ‘ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರನ್ನು ಸಾಲ ಮರುಪಾವತಿ ಮಾಡುವಂತೆ ಪೀಡಿಸುವಂತಿಲ್ಲ.
ಈ ರೀತಿ ಮಾಡುವುದನ್ನು ಅಮಾನವೀಯ ಮತ್ತು ಖಂಡನೀಯ’ ಎಂದಿದ್ದಾರೆ.ಅಲ್ಲದೆ ತಮ್ಮವರನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಕಷ್ಟಪಡುತ್ತಿರುವವರ ಬಳಿ ಸಾಲ ಮರುಪಾವತಿಸುವಂತೆ ಒತ್ತಾಯಿಸುವುದನ್ನು ಸಹಿಸಲಾಗದು. ತಹ ಪ್ರಕರಣಗಳು ಕಂಡುಬಂದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಎಂದು ಅವರು ಎಚ್ಚರಿಸಿದ್ದಾರೆ.