ಆಲಪ್ಪುಳ: ಕೇರಳ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಅವರನ್ನು ಕೊಲೆ ಮಾಡಿದ 15 ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶೆ ಶ್ರೀದೇವಿ ಅವರಿಗೆ ಬೆದರಿಕೆ ಹಾಕಿದ 4 ಜನರನ್ನು ಬಂಧಿಸಲಾಗಿದೆ.‘ಸೆಷನ್ಸ್ ಕೋರ್ಟ್ ಜಡ್ಜ್ ಶ್ರೀದೇವಿ ಅವರಿಗೆ ಜೀವ ಬೆದರಿಕೆ ಹಾಕಿದ ಸಂಬಂಧ ಇದುವರೆಗೂ 5 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ನಾಲ್ವರನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರನ್ನು ನಸೀರ್‌ಮೊನ್, ರಫಿ, ನವಾಸ್ ನೈನಾ ಮತ್ತು ಶಹಜಹಾನ್ ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.