ಆಲಪ್ಪುಳ: ನವಜಾತ ಶಿಶುವೊಂದು ಗರ್ಭದಲ್ಲಿದ್ದಾಗಲೇ ಅನುವಂಶೀಯ ಸಮಸ್ಯೆಯಿಂದ ಬಳಲುತ್ತಿದ್ದುದನ್ನು ಗುರುತಿಸುವಲ್ಲಿ ವಿಫಲರಾದ 4 ವೈದ್ಯರ ವಿರುದ್ಧ ದೂರು ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ತಂಡ ತನಿಖೆ ನಡೆಸಲಿದ್ದು, ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದವರ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಏನಿದು ಘಟನೆ?:ಸುರುಮಿ ಗರ್ಭಿಣಿಯಾಗಿದ್ದಾಗ ಕಡಪ್ಪುರಂ ಆಸ್ಪತ್ರೆಯಲ್ಲಿ ಆಕೆಯ ತಪಾಸಣೆ ನಡೆಸಿದ್ದ ವೈದ್ಯರು ಭ್ರೂಣದಲ್ಲಿರುವ ದೋಷಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದು, ವರದಿಗಳು ಸರಿಯಿದೆ ಎಂಬ ಭರವಸೆ ನೀಡಿದ್ದರು. ಆದರೆ ಪ್ರಸವದ ಸಮಯದಲ್ಲಿ ಭ್ರೂಣದಲ್ಲಿ ಚಲನೆ ಹಾಗೂ ಹೃದಯಬಡಿತ ಇರದ ಕಾರಣ ಆಕೆಯನ್ನು ಅಲಪ್ಪುಜದ ಆಸ್ಪತ್ರೆಗೆ ಸೇರಿಸಲಾಗಿತ್ತು.