ಅ.4ರಿಂದ ಬ್ಯಾಂಕ್‌ಗೆ ಚೆಕ್‌ ಕೊಟ್ಟ ಕೆಲವೇ ಗಂಟೆಗಳಲ್ಲಿ ಕ್ಲಿಯರೆನ್ಸ್

Published : Aug 14, 2025, 05:53 AM IST
Indian Bank Apprentice Recruitment 2025

ಸಾರಾಂಶ

ಗ್ರಾಹಕರು ಬ್ಯಾಂಕ್‌ಗೆ ಚೆಕ್‌ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್‌ (ಖಾತೆಗೆ ಹಣ ಜಮೆ ಮಾಡುವ) ಮಾಡುವ ವ್ಯವಸ್ಥೆ ದೇಶವ್ಯಾಪಿ ಎಲ್ಲಾ ಬ್ಯಾಂಕ್‌ಗಳಲ್ಲಿ ಅ.4ರಿಂದ ಜಾರಿಗೆ ಬರಲಿದೆ. ಹೀಗಾಗಿ ಚೆಕ್‌ ಕ್ಲಿಯರೆನ್ಸ್‌ಗೆ 2 ದಿನಗಳವರೆಗೂ ಕಾಯಬೇಕಾದ ತೊಂದರೆಗಳಿಗೆ ಶೀಘ್ರವೇ ತೆರೆ ಬೀಳಲಿದೆ.

ಮುಂಬೈ: ಗ್ರಾಹಕರು ಬ್ಯಾಂಕ್‌ಗೆ ಚೆಕ್‌ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್‌ (ಖಾತೆಗೆ ಹಣ ಜಮೆ ಮಾಡುವ) ಮಾಡುವ ವ್ಯವಸ್ಥೆ ದೇಶವ್ಯಾಪಿ ಎಲ್ಲಾ ಬ್ಯಾಂಕ್‌ಗಳಲ್ಲಿ ಅ.4ರಿಂದ ಜಾರಿಗೆ ಬರಲಿದೆ. ಹೀಗಾಗಿ ಚೆಕ್‌ ಕ್ಲಿಯರೆನ್ಸ್‌ಗೆ 2 ದಿನಗಳವರೆಗೂ ಕಾಯಬೇಕಾದ ತೊಂದರೆಗಳಿಗೆ ಶೀಘ್ರವೇ ತೆರೆ ಬೀಳಲಿದೆ.

ಪ್ರಸಕ್ತ ಬ್ಯಾಂಕ್‌ಗಳಲ್ಲಿ ಚೆಕ್‌ ಸಲ್ಲಿಸಿದ ಬಳಿಕ ಅದನ್ನು ಸ್ಕ್ಯಾನ್‌ ಮಾಡಿ, ಮುಂದಿನ ಹಂತಕ್ಕೆ ಸಲ್ಲಿಸಿ, ಅದನ್ನು ಕ್ಲಿಯರ್‌ ಮಾಡಲು ಕನಿಷ್ಠ 1ರಿಂದ ಗರಿಷ್ಠ 2 ದಿನ ತಗುಲುತ್ತಿತ್ತು.

ಆದರೆ ಅ.4ರಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಅದರ ಪರಿಣಾಮ ಬ್ಯಾಂಕ್‌ಗಳಿಗೆ ಚೆಕ್ಕ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್‌ ಮಾಡಲಾಗುವುದು. ಎರಡು ಹಂತದಲ್ಲಿ ಈ ಬದಲಾವಣೆ ಜಾರಿಯಾಗಲಿದ್ದು ಈ ವರ್ಷದ ಆಕ್ಟೋಬರ್‌ 4 ಮತ್ತು ಮುಂದಿನ ವರ್ಷದ ಜ.3ರಿಂದ ಜಾರಿಗೆ ಬರಲಿದ್ದು, ಎಲ್ಲಾ ಬ್ಯಾಂಕುಗಳಲ್ಲಿ ಬೆ.1ರಿಂದ ಸಂಜೆ 4ರ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.

PREV
Read more Articles on

Recommended Stories

ದಿಲ್ಲಿ ಹುಮಾಯೂನ್‌ ಸಮಾಧಿ ಬಳಿ ಮಸೀದಿ ಕುಸಿತ: 5 ಸಾವು
ಟ್ರಂಪ್‌ಗೆ ಸಡ್ಡು: ರಷ್ಯಾದಿಂದ ಭಾರತಕ್ಕೆ ಹೆಚ್ಚು ತೈಲ