ಆಪ್ ತೊರೆದ 24 ಗಂಟೆಯಲ್ಲಿ ಚಡ್ಢಾ ಇನ್‌ಸ್ಟಾ ಹಿಂಬಾಲಕರ ಸಂಖ್ಯೆಯಲ್ಲಿ 10 ಲಕ್ಷ ಇಳಿಕೆ!

KannadaprabhaNewsNetwork |  
Published : Apr 26, 2026, 04:00 AM ISTUpdated : Apr 26, 2026, 04:37 AM IST
Raghav Chadha

ಸಾರಾಂಶ

ರಾಜ್ಯಸಭಾ ಸಂಸದ ರಾಘವ್‌ ಚಡ್ಢಾ, ಆಪ್‌ ತೊರೆದು ಬಿಜೆಪಿ ಸೇರಿದ ಕೇವಲ 24 ಗಂಟೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಚಡ್ಢಾ ಬಿಜೆಪಿ ಸೇರ್ಪಡೆಯು ಜೆನ್‌ ಝೀಗಳನ್ನು ಆಕರ್ಷಿಸಲು ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನವದೆಹಲಿ: ರಾಜ್ಯಸಭಾ ಸಂಸದ ರಾಘವ್‌ ಚಡ್ಢಾ, ಆಪ್‌ ತೊರೆದು ಬಿಜೆಪಿ ಸೇರಿದ ಕೇವಲ 24 ಗಂಟೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಚಡ್ಢಾ ಬಿಜೆಪಿ ಸೇರ್ಪಡೆಯು ಜೆನ್‌ ಝೀಗಳನ್ನು ಆಕರ್ಷಿಸಲು ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಫಾಲೋವರ್‌ಗಳ ಸಂಖ್ಯೆ 1.35 ಕೋಟಿಗೆ ಇಳಿದಿದೆ

ಶುಕ್ರವಾರ ಚಡ್ಢಾರಿಗೆ ಇನ್‌ಸ್ಟಾದಲ್ಲಿ 1.46 ಕೋಟಿ ಫಾಲೋವರ್‌ಗಳಿದ್ದರು. ಶುಕ್ರವಾರವೇ ಅವರು ಆಪ್‌ ತೊರೆದು ಬಿಜೆಪಿ ಸೇರ್ಪಡೆಯಾದರು. ಶನಿವಾರ ಮಧ್ಯಾಹ್ನ 1 ಗಂಟೆಗೆ ಫಾಲೋವರ್‌ಗಳ ಸಂಖ್ಯೆ 1.35 ಕೋಟಿಗೆ ಇಳಿದಿದೆ. ಅಂದರೆ 24 ಗಂಟೆಗಳಲ್ಲಿ 10 ಲಕ್ಷ ಕಡಿಮೆಯಾಗಿದೆ.

ವೈರಲ್ ‘ಅನ್‌ಫಾಲೋ’ ಅಭಿಯಾನ

 ಈ ಬಗ್ಗೆ ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ ಟ್ವೀಟ್ ಮಾಡಿದ್ದು, ‘ಇನ್‌ಸ್ಟಾಗ್ರಾಂನಲ್ಲಿ ಜೆನ್‌ ಝೀ ನಡೆಸಿದ ವೈರಲ್ ‘ಅನ್‌ಫಾಲೋ’ ಅಭಿಯಾನದಿಂದ ಚಡ್ಢಾ ಅವರ ಫಾಲೋವರ್‌ಗಳು 24 ಗಂಟೆಗಳಲ್ಲಿ 10 ಲಕ್ಷ ಕಡಿಮೆಯಾಗಿದ್ದಾರೆ. ಇಂಟರ್ನೆಟ್ ನಿಮ್ಮನ್ನು ಒಂದು ರಾತ್ರಿಯಲ್ಲಿ ಹೀರೋ ಮಾಡಬಲ್ಲುದು. ಅದೇ ಇಂಟರ್ನೆಟ್ ನಿಮ್ಮನ್ನು ಒಂದು ರಾತ್ರಿಯಲ್ಲಿ ಶೂನ್ಯಕ್ಕೆ ತಳ್ಳಬಲ್ಲದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಕ್ಷಯ್‌ ಪುತ್ರಿಯ ನಗ್ನ ಚಿತ್ರಕ್ಕೆ ಬೇಡಿಕೆ : ಓರ್ವ ಆರೋಪಿ ಸೆರೆ
2 ವರ್ಷ ಓಡಿಹೋಗಿದ್ದ ಪತ್ನಿ ಮತದಾನ ವೇಳೆ ಸಿಕ್ಕಿಬಿದ್ಲು!