ನಿರಂತರ ಖರೀದಿ - ಚಿನ್ನದ ದರ 78,000 ಗಡಿ ದಾಟಿ ದಾಖಲೆ : ಹೊಸ ಎತ್ತರಕ್ಕೆ ಚಿನ್ನದ ಬೆಲೆ

KannadaprabhaNewsNetwork |  
Published : Sep 27, 2024, 01:22 AM ISTUpdated : Sep 27, 2024, 11:52 AM IST
trending golden kada designs 2024

ಸಾರಾಂಶ

ಚಿನ್ನಾಭರಣ ವ್ಯಾಪಾರಿಗಳ ನಿರಂತರ ಖರೀದಿ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ಬದಲಾವಣೆಯಿಂದಾಗಿ ಚಿನ್ನದ ಬೆಲೆ ಗುರುವಾರ ಮತ್ತಷ್ಟು ಏರಿಕೆ ಕಂಡು ಹೊಸ ದಾಖಲೆ ಸೃಷ್ಟಿಸಿದೆ.  

ನವದೆಹಲಿ: ಚಿನ್ನಾಭರಣ ವ್ಯಾಪಾರಿಗಳ ನಿರಂತರ ಖರೀದಿ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ಬದಲಾವಣೆಯಿಂದಾಗಿ ಚಿನ್ನದ ಬೆಲೆ ಗುರುವಾರ ಮತ್ತಷ್ಟು ಏರಿಕೆ ಕಂಡು ಹೊಸ ದಾಖಲೆ ಸೃಷ್ಟಿಸಿದೆ. ಗುರುವಾರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 78000 ಗಡಿ ದಾಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 400 ರು. ಜಿಗಿದು 78,250 ರು.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ದರವೂ ಕೆಜಿಗೆ 1000 ಏರಿಕೆಯಾಗಿ ಕೇಜಿಗೆ 94000 ರು.ಗೆ ತಲುಪಿದೆ.

ಇನ್ನು ಮುಂಬೈ, ಬೆಂಗಳೂರು, ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನ ಪ್ರತಿ 10 ಗ್ರಾಂಗೆ 77,020 ರು. ಇದೆ. ಬೆಳ್ಳಿ ಪ್ರತಿ ಕೇಜಿಗೆ ಮುಂಬೈನಲ್ಲಿ 95000, ಬೆಂಗಳೂರಿನಲ್ಲಿ 90,100 ರು. ನಷ್ಟಿದೆ. ಚೆನ್ನೈನಲ್ಲಿ ಬುಧವಾರ ಕೇಜಿ ಬೆಳ್ಳಿಗೆ 1,01,000 ರು. ಇತ್ತು. ಗುರುವಾರ ಯಾವುದೇ ಬದಲಾವಣೆ ಆಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ