₹1 ಲಕ್ಷ ಗಡಿ ದಾಟಿದ ಚಿನ್ನದ ಬೆಲೆ!

KannadaprabhaNewsNetwork | Published : Apr 23, 2025 12:36 AM

ಸಾರಾಂಶ

ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, 10 ಗ್ರಾಂ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 1800 ರು. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ ₹1 ಲಕ್ಷದ ಗಡಿ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಂಗಳೂರಲ್ಲೂ 1 ಲಕ್ಷ ರು. ದಾಟಿದ್ದು, 99.5 ಶುದ್ಧತೆಯ ಚಿನ್ನದ ದರ 1,05,000 ರು.ಗೆ ಏರಿದೆ.

ನವದೆಹಲಿ: ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, 10 ಗ್ರಾಂ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 1800 ರು. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ ₹1 ಲಕ್ಷದ ಗಡಿ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಂಗಳೂರಲ್ಲೂ 1 ಲಕ್ಷ ರು. ದಾಟಿದ್ದು, 99.5 ಶುದ್ಧತೆಯ ಚಿನ್ನದ ದರ 1,05,000 ರು.ಗೆ ಏರಿದೆ.ಅಕ್ಷಯ ತೃತೀಯ ಸಮೀಪಿಸುತ್ತಿರುವ ಹಿನ್ನೆಲೆ ಹಾಗೂ ವಿವಾಹ ಋತುವಿನ ಕಾರಣ ಜೊತೆಗೆ ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಖಿಲ ಭಾರತ ಸರಾಫಾ ಸಂಘದ ಪ್ರಕಾರ ಮಂಗಳವಾರ ಶೇ.99.9ಷ್ಟು ಶುದ್ಧತೆಯ ಚಿನ್ನದ ದರ 1800 ರು.ಗಳಷ್ಟು ಏರಿಕೆಯಾಗಿ ಸಾರ್ವಕಾಲಿಕ 1,01,600 ರು.ಗೆ ತಲುಪಿದೆ. ಸೋಮವಾರ ಈ ದರ 99,800 ರು. ಇತ್ತು. ಇನ್ನು ಮಂಗಳವಾರ ಶೇ.99.5ರಷ್ಟು ಶುದ್ಧತೆಯ ಚಿನ್ನದ ಬೆಲೆಯೂ 2800 ರು.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 1,02,100 ರು.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಂ.ಗೆ 99, 300 ರುಗಳಷ್ಟಿತ್ತು. ಈ ಮಧ್ಯೆ ಮಂಗಳವಾರ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರತಿ ಕೇಜಿಗೆ 98,500 ರು. ನಲ್ಲಿ ಸ್ಥಿರವಾಗಿತ್ತು.------

63 ರು. ಇದ್ದ ಚಿನ್ನ ಈಗ 1 ಲಕ್ಷ ರು.!

75 ವರ್ಷಗಳ ಬೆಲೆ ಏರಿಕೆ ಸಾಗಿ ಬಂದ ಹಾದಿ

1950 ರಿಂದ 1960ರ ಅವಧಿಯಲ್ಲಿ 10 ಗ್ರಾಂ ಚಿನ್ನದ ದರವು ಗ್ರಾಹಕರಿಗೆ 100- 200 ರು. ಅಸುಪಾಸಿನಲ್ಲಿ ಸಿಗುತ್ತಿತ್ತು.1970ರ ಬಳಿಕ ಬೆಲೆ ಏರಿಕೆ ಪರ್ವ ಆರಂಭಗೊಂಡಿತು. 6 ದ

Share this article