ಮಾರ್ಚ್‌ನಲ್ಲಿ 1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ : ಕರ್ನಾಟಕಕ್ಕೆ 2ನೇ ಸ್ಥಾನ - ಇದುವರೆಗಿನ 2ನೇ ಗರಿಷ್ಠ ಸಂಗ್ರಹ

ಸಾರಾಂಶ

ಮಾರ್ಚ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 1.96 ಲಕ್ಷ ಕೋಟಿ ತಲುಪಿದೆ. ಇದು ಜಿಎಸ್ಟಿ ನೀತಿ ಜಾರಿಯಾದ ಬಳಿಕ ದಾಖಲಾದ 2ನೇ ಗರಿಷ್ಠ ತೆರಿಗೆ ಪ್ರಮಾಣವಾಗಿದೆ. ಜೊತೆಗೆ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ.9.9ರಷ್ಟು ಹೆಚ್ಚಳವಾಗಿದೆ.

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 1.96 ಲಕ್ಷ ಕೋಟಿ ತಲುಪಿದೆ. ಇದು ಜಿಎಸ್ಟಿ ನೀತಿ ಜಾರಿಯಾದ ಬಳಿಕ ದಾಖಲಾದ 2ನೇ ಗರಿಷ್ಠ ತೆರಿಗೆ ಪ್ರಮಾಣವಾಗಿದೆ. ಜೊತೆಗೆ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ.9.9ರಷ್ಟು ಹೆಚ್ಚಳವಾಗಿದೆ.

ದೇಶೀಯ ವರ್ಗಾವಣೆಗಳ ಮೂಲಕ 1.49 ಲಕ್ಷ ಕೋಟಿ ರು., ಆಮದಿತ ಸರಕುಗಳಿಂದ 46,919 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರೀಯ ಜಿಎಸ್ಟಿ 38145 ಕೋಟಿ ರು., ರಾಜ್ಯ ಜಿಎಸ್ಟಿ 49891 ಕೋಟಿ ರು., ಸಂಯೋಜಿತ ಜಿಎಸ್ಟಿ 95853 ಕೋಟಿ ರು. ಮತ್ತು ಸೆಸ್‌ ಮೂಲಕ 12253 ಕೋಟಿ ರು. ಸಂಗ್ರಹವಾಗಿದೆ.

ಇನ್ನು 31534 ಕೋಟಿ ರು. ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ, 13497 ಕೋಟಿ ರು.ನೊಂದಿಗೆ ಕರ್ನಾಟಕ 2ನೇ ಸ್ಥಾನ ಮತ್ತು 11795 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ತಮಿಳುನಾಡು 3ನೇ ಸ್ಥಾನದಲ್ಲಿದೆ.

Share this article