ಫೆಬ್ರವರಿಯಲ್ಲಿ 1.68 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

KannadaprabhaNewsNetwork |  
Published : Mar 02, 2024, 01:49 AM IST
ಜಿಎಸ್‌ಟಿ | Kannada Prabha

ಸಾರಾಂಶ

ಕಳೆದ ವರ್ಷಕ್ಕಿಂತ ಜಿಎಸ್ಟಿ ಸಂಗ್ರಹದಲ್ಲಿ ಶೇ.12ರಷ್ಟು ಭಾರೀ ಏರಿಕೆ ಕಂಡುಬಂದಿದೆ.

ನವದೆಹಲಿ: ಕಳೆದ ಫೆಬ್ರವರಿ ತಿಂಗಳಲ್ಲಿ 168337 ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು 2023ರ ಫೆಬ್ರವರಿಗೆ ಹೋಲಿಸಿದರೆ ಶೇ.12.5ರಷ್ಟು ಹೆಚ್ಚು. ದೇಶೀಯ ವಹಿವಾಟಿನಲ್ಲಿ ಕಂಡುಬಂದ ಏರಿಕೆ ಒಟ್ಟಾರೆ ಜಿಎಸ್ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ (2023 ಏಪ್ರಿಲ್‌- 2024 ಫೆಬ್ರವರಿ) ಅವಧಿಯಲ್ಲಿ ಒಟ್ಟಾರೆ 18.40 ಲಕ್ಷ ಕೋಟಿ ರು.ನಷ್ಟು ಜಿಎಸ್ಟಿ ಸಂಗ್ರಹವಾದಂತೆ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11.7ರಷ್ಟು ಅಧಿಕ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 1.67 ಲಕ್ಷ ಕೋಟಿ ರು.ನಷ್ಟು ಜಿಎಸ್ಟಿ ಸಂಗ್ರಹವಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಸರಾಸರಿ ಪ್ರಮಾಣವಾದ 1.5 ಲಕ್ಷ ಕೋಟಿ ರು.ಗಿಂತ ಅಧಿಕ ಎಂದು ಸರ್ಕಾರ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!
ಬಂಗಾಳದಲ್ಲಿ ಬಾಬ್ರಿ ಶೈಲಿ ಮಸೀದಿ ನಿರ್‍ಮಾಣ ಶುರು