200 ಕೋಟಿ ರು. ಆಸ್ತಿ ದಾನ ಮಾಡಿ ಸನ್ಯಾಸಿ ಆದ ದಂಪತಿ!

KannadaprabhaNewsNetwork |  
Published : Apr 16, 2024, 01:04 AM ISTUpdated : Apr 16, 2024, 06:11 AM IST
ಭವೇಶ್‌  | Kannada Prabha

ಸಾರಾಂಶ

200 ಕೋಟಿ ರು. ಆಸ್ತಿ ಮೌಲ್ಯ ಹೊಂದಿದುವ ಜೈನ ಧರ್ಮಕ್ಕೆ ಸೇರಿದ ದಂಪತಿ ತಮ್ಮೆಲ್ಲ ಆಸ್ತಿಯನ್ನು ದಾನ ಮಾಡಿ , ಬದುಕಿನ ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಸ್ವೀಕರಿಸಿರುವ ಪ್ರಸಂಗ ಗುಜರಾತ್ ನಲ್ಲಿ ನಡೆದಿದೆ.

ಸೂರತ್ : 200 ಕೋಟಿ ರು. ಆಸ್ತಿ ಮೌಲ್ಯ ಹೊಂದಿದುವ ಜೈನ ಧರ್ಮಕ್ಕೆ ಸೇರಿದ ದಂಪತಿ ತಮ್ಮೆಲ್ಲ ಆಸ್ತಿಯನ್ನು ದಾನ ಮಾಡಿ , ಬದುಕಿನ ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಸ್ವೀಕರಿಸಿರುವ ಪ್ರಸಂಗ ಗುಜರಾತ್ ನಲ್ಲಿ ನಡೆದಿದೆ.

ಹೀಮಂತ್ ನಗರದ ಕಟ್ಟಡ ಉದ್ಯಮಿಯಾಗಿರುವ ಉದ್ಯಮಿ ಭವೇಶ್ ಭಂಡಾರಿ ಮತ್ತು ಆತನ ಪತ್ನಿ ಫೆಬ್ರವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮಲ್ಲಿದ್ದ ಅಂದಾಜು 200 ಕೋಟಿ ರು. ಸಂಪತ್ತು ದಾನ ಮಾಡಿದ್ದು, ಈ ತಿಂಗಳ 22ರಂದು ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಭಂಡಾರಿ ಕುಟುಂಬದ ಈ ನಡೆ ಗುಜರಾತ್ ನಾದ್ಯಂತ ಗಮನ ಸೆಳೆದಿದೆ. 

ಭವೇಶ್ ದಂಪತಿಯ 19 ವರ್ಷದ ಮಗ ಮತ್ತು 16 ವರ್ಷದ ಮಗಳು 2022 ರಲ್ಲಿ ಸನ್ಯಾಸ ಜೀವನವನ್ನು ಸ್ವೀಕರಿಸಿದ್ದರು. ಮಕ್ಕಳಿಂದ ಪ್ರೇರಣೆ ಪಡೆದು ಇದೀಗ ಇಬ್ಬರೂ ಕೂಡ ಅದೇ ಹಾದಿ ತುಳಿದಿದ್ದಾರೆ.ಇದೇ ತಿಂಗಳ 22 ರಂದು ಭವೇಶ್ ದಂಪತಿಯ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ.

 ಸನ್ಯಾಸತ್ವ ಸ್ವೀಕರಿಸಿದ ನಂತರ ತಮ್ಮ ಕುಟುಂಬದೊಂದಿಗೆ ದಂಪತಿ ಎಲ್ಲ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಬೆಲೆಬಾಳುವ ಯಾವುದೇ ವಸ್ತುವನ್ನು ಅವರು ಹೊಂದುವಂತಿಲ್ಲ. ಎರಡು ಬಿಳಿ ಬಟ್ಟೆಗಳನ್ನು ಜೊತೆಗೆ ಭಿಕ್ಷೆಗೆ ಒಂದು ಪಾತ್ರೆಯನ್ನು ನೀಡಲಾಗುತ್ತದೆ. ದೀಕ್ಷೆ ಸ್ವೀಕಾರ ಮಾಡಿ ಸನ್ಯಾಸಿಗಳಾದವರು ಆ ನಂತರ ಜೀವನದುದ್ದಕ್ಕೂ ಬರಿಗಾಲಿನಲ್ಲಿ ನಡೆಯುತ್ತಾರೆ. ಮತ್ತು ಭಿಕ್ಷೆ ಮೂಲಕ ಜೀವನ ನಡೆಸುತ್ತಾರೆ. ಈ ದಂಪತಿಗಳು ಕೂಡ ಅದೇ ನಿಯಮ ಪಾಲಿಸಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಂಡಕ್ಷನ್‌ ಸ್ಟವ್‌ಗಳಿಗೆ ಭಾರೀ ಡಿಮ್ಯಾಂಡ್‌: 300% ಬೇಡಿಕೆ ಹೆಚ್ಚಳ!
ಮುಸ್ಲಿಂ ಹುಡುಗನ ಜತೆ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ!