ಅಹಮದಾಬಾದ್: ಗುರುವಾರದ ವಿಮಾನ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ಇವರು ವಿಮಾನ ದುರಂತದಲ್ಲಿ ಹತರಾದ ರಾಜ್ಯದ 2ನೇ ಸಿಎಂ ಆಗಿದ್ದಾರೆ. ಪುತ್ರಿಯನ್ನು ನೋಡಲು ಲಂಡನ್‌ಗೆ ಹೊರಟಿದ್ದರು. ಈ ಹಿಂದೆ 1965ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಬಲವಂತ್ ರಾಯ್ ಮೆಹ್ತಾ ಅವರೂ ಸಹ ವಿಮಾನ ದುರಂತದಲ್ಲಿಯೇ ಮೃತಪಟ್ಟಿದ್ದರು. 1965ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಆಗ ಮೆಹ್ತಾ ಅವರು ದ್ವಾರಕಾ ಸಮೀಪದ ಮಿಥಾಪುರ್‌ನಿಂದ ಕಛ್‌ಗೆ ಸಣ್ಣ ವಿಮಾನ ಏರಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಾಕಿಸ್ತಾನದ ಪಡೆಗಳು ಇವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ವಿಮಾನ ಪತನಗೊಂಡು ಮೆಹ್ತಾ ಮೃತಪಟ್ಟಿದ್ದರು.