ಕೋಲ್ಕತಾ: ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಕತ್ತಾ (ಐಐಎಂ-ಸಿ) ಕ್ಯಾಂಪಸ್‌ನಲ್ಲಿ ನಡೆದ ಅತ್ಯಾಚಾರ ಘಟನೆಯ ಆರೋಪಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆ ಲೋಕಾಪುರ ಮೂಲದ ವಿದ್ಯಾರ್ಥಿ ಪರಮಾನಂದ ಟೋಪಣ್ಣವರಗೆ (ಪರಮಾನಂದ ಜೈನ್) ಶನಿವಾರ ಜಾಮೀನು ನೀಡಲಾಗಿದೆ.
ದೂರುದಾರ ಯುವತಿ ತನಿಕೆಗೆ ಅಸಹಕಾರ ತೋರುತ್ತಿದ್ದು, ಹೇಳಿಕೆ ನೀಡಲು ಆಗಮಿಸಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. 2 ಬಾರಿ ಮ್ಯಾಜಿಸ್ಟ್ರೇಟ್ ಎದುರೂ ಹಾಜರಾಗಿಲ್ಲ. ಪೊಲೀಸರು ತನಿಖಾ ಉದ್ದೇಶಗಳಿಗಾಗಿ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತರಲಾಯಿತು.
ಹೀಗಾಗಿ ಅಲಿಪುರ ಸ್ಥಳೀಯ ಕೋರ್ಟು 50 ಸಾವಿರ ರು. ಬಾಂಡ್ ಪಡೆದು ಆರೋಪಿಗೆ ಜಾಮೀನು ನೀಡಿತು. ಈ ಅತ್ಯಾಚಾರ ಘಟನೆ ಜು.11 ರಂದು ಐಐಎಂ-ಸಿ ಕ್ಯಾಂಪಸ್‌ನಲ್ಲಿ ನಡೆದಿತ್ತು.