;Resize=(412,232))
ಢಾಕಾ: ಭಾರತದಲ್ಲಿ ಕುಳಿತುಕೊಂಡು ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ ರಾಜಕೀಯ ಹೇಳಿಕೆ ನೀಡುವುದು ಸ್ನೇಹಮಯಿ ವರ್ತನೆಯಲ್ಲ. ನಾವು ಭಾರತದ ಎದುರು ಗಡೀಪಾರು ಬೇಡಿಕೆ ಇಡುವವರೆಗೂ ಹಸೀನಾ ಅವರು ಮೌನವಾಗಿರಬೇಕು. ತನ್ಮೂಲಕ ಎರಡೂ ದೇಶಗಳಿಗೆ ಇರುಸುಮುರುಸಾಗುವುದನ್ನು ತಡೆಯಬೇಕು ಎಂದು ಬಾಂಗ್ಲಾದೇಶದ ನೂತನ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಸಲಹೆ ಮಾಡಿದ್ದಾರೆ.
ಆ.15ರಂದು ಬಾಂಗ್ಲಾ ತೊರೆದ ಹಸೀನಾ ಅವರು ಆ.13ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಕೆಲವರು ಭಯೋತ್ಪಾದಕ ದಾಳಿ ನಡೆಸಿದ್ದಾರೆ. ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದರು.