ನವದೆಹಲಿ: ‘ಯೋಗ ಗುರು ಬಾಬಾ ರಾಮ್‌ದೇವ್ ಅವರ ಒಡೆತನದ ಪತಂಜಲಿಯ ಚ್ಯವನ್‌ಪ್ರಾಶ್ ಜಾಹೀತಾತು ಅವಹೇಳನಕಾರಿಯಾಗಿದೆ. ಅದು ಇತರ ಚ್ಯವನಪ್ರಾಶಗಳನ್ನು ಧೋಖಾ ಎಂದು ಕರೆದ ಜಾಹೀರಾತನ್ನು 3 ದಿನಗಳ ಒಳಗಾಗಿ ಎಲ್ಲ ಮಾಧ್ಯಮಗಳಿಂದ ತೆಗೆಯಬೇಕು’ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಇದನ್ನು ಪರಿಗಣಿಸಿರುವ ಪೀಠ, ‘ಇದು ಕೇವಲ ಒಂದು ಬ್ರ್ಯಾಂಡ್‌ಗಷ್ಟೇ ಅಲ್ಲದೇ ಚ್ಯವನ್‌ಪ್ರಾಶ ಎಂಬ ಅಂಶಕ್ಕೆ ಅವಮಾನಕಾರಿಯಾಗಿದೆ. ಅನ್ಯ ಚ್ಯವನ್‌ಪ್ರಾಶ ಮಾರುಕಟ್ಟೆಗೆ ಬಿಡಲು ಯೋಗ್ಯ ಎಂದು ಆಡಳಿತ ಅನುಮತಿ ಕೊಟ್ಟ ಬಳಿಕ ಈ ರೀತಿಯ ಚಿತ್ರಿಸುವಿಕೆ ತಪ್ಪು. ಹೀಗಾಗಿ 3 ದಿನಗಳ ಒಳಗಾಗಿ ಎಲ್ಲ ವಿಧದ ಮಾಧ್ಯಮಗಳಿಂದ ಜಾಹೀರಾತು ಹಿಂತೆಗೆಯಬೇಕು’ ಎಂದು ಪೀಠ ಆದೇಶಿಸಿದೆ.