ದಯಾಮರಣಿ ಹರೀಶ್‌ ರಾಣಾಗೆ ಭಾವುಕ ವಿದಾಯ

KannadaprabhaNewsNetwork |  
Published : Mar 26, 2026, 02:00 AM ISTUpdated : Mar 26, 2026, 05:01 AM IST
Harish Rana

ಸಾರಾಂಶ

13 ವರ್ಷದಿಂದ ಕೋಮಾದಲ್ಲಿದ್ದು, ಮಂಗಳವಾರ ದಯಾಮರಣದ ಮೂಲಕ ಇಹಲೋಕ ತ್ಯಜಿಸಿದ ಹರೀಶ್‌ ರಾಣಾ (31) ಅವರ ಅಂತ್ಯಕ್ರಿಯೆಯನ್ನು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ ಸ್ಮಶಾನದಲ್ಲಿ ಬುಧವಾರ ನೆರವೇರಿಸಲಾಯಿತು.

ಗಾಜಿಯಾಬಾದ್‌: 13 ವರ್ಷದಿಂದ ಕೋಮಾದಲ್ಲಿದ್ದು, ಮಂಗಳವಾರ ದಯಾಮರಣದ ಮೂಲಕ ಇಹಲೋಕ ತ್ಯಜಿಸಿದ ಹರೀಶ್‌ ರಾಣಾ (31) ಅವರ ಅಂತ್ಯಕ್ರಿಯೆಯನ್ನು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ ಸ್ಮಶಾನದಲ್ಲಿ ಬುಧವಾರ ನೆರವೇರಿಸಲಾಯಿತು.

ಹರೀಶ್‌ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ ಎಂದು ಬ್ರಹ್ಮಕುಮಾರಿಯ ಸೋದರಿ ಲವ್ಲಿಯವರು ತಿಳಿಸಿದರು.‘ನನ್ನ ಮಗ ಈಗ ಸುಖಮಯ ಸ್ಥಾನದಲ್ಲಿದ್ದಾನೆ. ಯಾರೂ ಅಳಬೇಡಿ’ ಎಂದು ಅಂತ್ಯಕ್ರಿಯೆಗೆ ಬಂದಿದ್ದವರ ಬಳಿ ವಿನಂತಿ ಮಾಡುತ್ತಾ, ಹರೀಶ್‌ ಅವರ ತಂದೆ ಅಶೋಕ್‌ ರಾಣಾ ಮಗನಿಗೆ ಭಾವುಕ ವಿದಾಯ ಹೇಳಿದರು. ಪಂಜಾಬ್‌ ವಿವಿಯಲ್ಲಿ ಓದುತ್ತಿದ್ದ ಹರೀಶ್‌, 2013ರಲ್ಲಿ 4ನೇ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿ ತಲುಪಿದ್ದರು. ಕೃತಕ ಜೀವರಕ್ಷಕಗಳಿಂದ ಉಸಿರಾಡುತ್ತಿದ್ದ ಅವರಿಗೆ ದೇಶದಲ್ಲೇ ಮೊದಲ ಬಾರಿ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಮಾ.24ರಂದು ಅವರು ನಿಧನರಾಗಿದ್ದರು.

ಉಡಾನ್ ಯೋಜನೆ ಅಡಿ ಇನ್ನೂ 100 ಏರ್‌ಪೋರ್ಟ್‌ ನಿರ್ಮಾಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ 28,480 ಕೋಟಿ ರು. ಅಂದಾಜು ವೆಚ್ಚದ 10 ವರ್ಷಗಳ ಅವಧಿಯ ಪರಿಷ್ಕೃತ ಉಡಾನ್‌ ಯೋಜನೆಗೆ ಅನುಮೋದನೆ ನೀಡಿದೆ.ಯೋಜನೆಯಡಿ ಈಗಾಗಲೇ ಅಸ್ತಿತ್ವದಲ್ಲಿರುವ ಆದರೆ ಬಳಕೆಯಲ್ಲಿಲ್ಲದ್ದ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಮುಂದಿನ 8 ವರ್ಷಗಳಲ್ಲಿ ಈ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 12,159 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

ಮುಂದಿನ 8 ವರ್ಷಗಳಲ್ಲಿ 3,661 ಕೋಟಿ ವೆಚ್ಚದಲ್ಲಿ 200 ಆಧುನಿಕ ಹೆಲಿಪ್ಯಾಡ್‌

ಇದರ ಜತೆಗೆ, ಯೋಜನೆಯಡಿ ಮುಂದಿನ 8 ವರ್ಷಗಳಲ್ಲಿ 3,661 ಕೋಟಿ ವೆಚ್ಚದಲ್ಲಿ 200 ಆಧುನಿಕ ಹೆಲಿಪ್ಯಾಡ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಇದೆ. ಇನ್ನು ಉಡಾನ್‌ ಏರ್ಪೋರ್ಟ್‌ಗಳಲ್ಲಿ ಕಾರ್ಯಾಚರಣೆಗೆ ಮುಂದೆ ಬರುವ ವಿಮಾನಯಾನ ಕಂಪನಿಗಳಿಗೆ ಮುಂದಿನ 10 ವರ್ಷಗಳ ವರೆಗೆ ಏರ್‌ಲೈನ್ಸ್‌ ಕಂಪನಿಗಳಿಗೆ ವಯಬಿಲಿಟಿ ಗ್ಯಾಪ್‌ ಫಂಡಿಂಗ್‌(ವಿಜಿಎಫ್‌) ರೂಪದಲ್ಲಿ 10,043 ಕೋಟಿ ರು.ನಷ್ಟು ಹಣಕಾಸು ನೆರವು ಕಲ್ಪಿಸಲೂ ಉದ್ದೇಶಿಸಲಾಗಿದೆ. ಈ ಸಂಬಂಧ ಬಜೆಟ್‌ನಲ್ಲೂ ಅಗತ್ಯ ಹಣಕಾಸು ನೆರವು ಒದಗಿಸಲು ನಿರ್ಧರಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಟ್ರಂಪ್ ಅಳಿಯ ಬೇಡ, ವ್ಯಾನ್ಸ್ ಜತೆ ಮಾತುಕತೆಗೆ ಸಿದ್ಧ : ಇರಾನ್‌
ಬಿಜೆಪಿಗೆ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಸೇರ್ಪಡೆ?