ಬೆಂಗ್ಳೂರು ನರ್ಸ್‌ ಸೇರಿ ಇಬ್ಬರಿಂದ ಹೃದಯಾಘಾತ ಆದವನ ರಕ್ಷಣೆ

KannadaprabhaNewsNetwork |  
Published : Jul 03, 2026, 01:15 AM IST
Nurse

ಸಾರಾಂಶ

ಬೆಂಗಳೂರಲ್ಲಿ ನರ್ಸಿಂಗ್‌ ಓದುತ್ತಿದ್ದ ಒಬ್ಬ ನರ್ಸ್‌ ಸೇರಿ ಕೇರಳದ ಎರ್ನಾಕುಲಂ ಜಿಲ್ಲೆಯ ಇಬ್ಬರು ದಾದಿಯರ ಸಮಯಪ್ರಜ್ಞೆಯು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದಾಗ ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದೆ. 

ಎರ್ನಾಕುಲಂ: ಬೆಂಗಳೂರಲ್ಲಿ ನರ್ಸಿಂಗ್‌ ಓದುತ್ತಿದ್ದ ಒಬ್ಬ ನರ್ಸ್‌ ಸೇರಿ ಕೇರಳದ ಎರ್ನಾಕುಲಂ ಜಿಲ್ಲೆಯ ಇಬ್ಬರು ದಾದಿಯರ ಸಮಯಪ್ರಜ್ಞೆಯು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದಾಗ ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಮತ್ತು ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್ ಅವರೇ ಈ ಜೀವರಕ್ಷಕರು.

ಸಿನೋಜ್ ಎಂಬುವರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ತೀವ್ರ ಎದೆ ನೋವು

ಬುಧವಾರ ಬೆಳಿಗ್ಗೆ ಕಾಲಡಿ ಸೇತುವೆ ಬಳಿ ಸಿನೋಜ್ ಎಂಬುವರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಟ್ರಾಫಿಕ್‌ ಜಾಂ ಕಾರಣ ಸಂಚಾರ ಸ್ಥಗಿತಗೊಂಡಿದ್ದರಿಂದ, ಕಾರಿನೊಳಗೆ ಕುಸಿದು ಬಿದ್ದರು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನರ್ಸ್‌ಗಳು

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನರ್ಸ್‌ಗಳು ರಸ್ತೆಬದಿಯಲ್ಲಿ ಗದ್ದಲವನ್ನು ಗಮನಿಸಿದರು. ಅವರು ತಕ್ಷಣ ಬಸ್‌ನಿಂದ ಇಳಿದು ಕಾರಿನ ಬಳಿಗೆ ಧಾವಿಸಿ ಹೃದಯ ಶ್ವಾಸಕೋಶದ ಪುನರುಜ್ಜೀವನ (ಸಿಪಿಆರ್) ಪ್ರಾರಂಭಿಸಿದರು. ಆತನನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಸಿಪಿಆರ್‌ ನೀಡಿ ಜೀವ ಉಳಿಸಿದರು.

ಇಬ್ಬರ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಐ ರಚಿತ ನಕಲಿ ತೀರ್ಪಿಗೆ ಸುಪ್ರೀಂ ಕಿಡಿ
ಭಾರತ-ಜಪಾನ್‌ ವಿವಿಧ ಒಪ್ಪಂದಗಳಿಗೆ ಅಂಕಿತ