ನಟಿ ಹೇಮಾಮಾಲಿನಿ ಪುತ್ರಿ ನಟಿ ಇಶಾ ಡಿಯೋಲ್‌, ಉದ್ಯಮಿ ಭರತ್‌ ವಿಚ್ಛೇದನ?

KannadaprabhaNewsNetwork | Updated : Feb 07 2024, 11:50 AM IST

ಸಾರಾಂಶ

ನಟಿ ಹೇಮಾಮಾಲಿನಿಯ ಪುತ್ರಿ ಇಶಾ ಡಿಯೋಲ್‌ ದಂತಿಗಳು ಬೇರೆಯಾಗಿದ್ದು, ವಿಚ್ಛೇದನದ ವಿಷಯವಾಗಿ ಗೌಪ್ಯತೆಯನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

ನವದೆಹಲಿ: ನಟಿ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್‌ ಮತ್ತು ಉದ್ಯಮಿ ಭರತ್‌ ತಖ್ತಾನಿ, 11 ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡು ಪರಸ್ಪರ ದೂರವಾಗಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಆದರೆ ಇವರು ವಿಚ್ಛೇದನ ಪಡೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ನಾವು ಪರಸ್ಪರ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ.

ಈ ಬದಲಾವಣೆಯ ಮೂಲಕ ನಮ್ಮ ಜೀವನದಲ್ಲಿ, ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನು ಗೌರವಿಸಿ’ ಎಂದು ಹೇಳಿಕೊಂಡಿದ್ದಾರೆ.

ಬಾಲಿವುಡ್ ತಾರೆಯರಾದ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಪುತ್ರಿ ಇಶಾ ಹಾಗೂ ಭರತ್‌ 2012ರಲ್ಲಿ ವಿವಾಹವಾಗಿದ್ದರು. ಇವರಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Share this article