ತೆರಿಗೆ ಮರು ಪರಿಶೀಲನೆ ಅರ್ಜಿ: ಕಾಂಗ್ರೆಸ್‌ ಅರ್ಜಿ ಹೈಕೋರ್ಟಲ್ಲೂ ವಜಾ

KannadaprabhaNewsNetwork |  
Published : Mar 23, 2024, 01:01 AM ISTUpdated : Mar 23, 2024, 09:02 AM IST
ಆದಾಯ ತೆರಿಗೆ | Kannada Prabha

ಸಾರಾಂಶ

ತೆರಿಗೆ ಮರು ಪರಿಶೀಲನೆಯ ಕಾಂಗ್ರೆಸ್‌ ಅರ್ಜಿ ಹೈಕೋರ್ಟಲ್ಲೂ ವಜಾ ಆಗಿದೆ. ಐಟಿ ರಿಟರ್ನ್‌ ಫೈಲ್‌ನಲ್ಲಿ ವಂಚನೆ ಪ್ರಕರಣದ ಸಂಬಂಧ ಕಾಂಗ್ರೆಸ್‌ ಅರ್ಜಿ ಸಲ್ಲಿಸಿತ್ತು.

ನವದೆಹಲಿ: ಕಾಂಗ್ರೆಸ್‌ ಪಕ್ಷವು ಆದಾಯ ತೆರಿಗೆ ಇಲಾಖೆಯಿಂದ ಮರುಪರಿಶೀಲನೆ ಮಾಡುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತು ಆದೇಶ ನೀಡಿದ ನ್ಯಾ. ಯಶ್ವಂತ್‌ ಶರ್ಮಾ ನೇತೃತ್ವದ ಪೀಠ, ‘ಕಾಂಗ್ರೆಸ್‌ ಪಕ್ಷದ ರಿಟ್‌ ಅರ್ಜಿಗಳನ್ನು ವಜಾ ಮಾಡಲಾಗಿದೆ’ ಎಂದು ತಿಳಿಸಿತು. 

ಏನಿದು ಪ್ರಕರಣ?
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ ಪಕ್ಷದಿಂದ ಸಲ್ಲಿಕೆ ಮಾಡಲಾಗಿದ್ದ 2014-15 ರಿಂದ 2016-17ವರೆಗಿನ ಮೂರು ಆರ್ಥಿಕ ಸಾಲಿನ ವಾರ್ಷಿಕ ವರದಿಯನ್ನು ಮರುಪರಿಶೀಲನೆ ಮಾಡಲು ಪ್ರಾರಂಭ ಮಾಡಿತ್ತು. 

ಆದರೆ ಕಾಂಗ್ರೆಸ್‌ ಪಕ್ಷದ ಪರ ವಾದ ಮಂಡಿಸಿದ್ದ ಖ್ಯಾತ ವಕೀಲ ಅಭಿಷೇಕ್‌ ಸಿಂಘ್ವಿ ಆದಾಯ ತೆರಿಗೆ ಇಲಾಖೆಯು 6 ಆರ್ಥಿಕ ಸಾಲಿಗಿಂತ ಹಿಂದಿನ ವಾರ್ಷಿಕ ವರದಿಯನ್ನು ಮರುಪರಿಶೀಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದರು. ಆದರೆ ಅವಕಾಶವಿದೆ ಎಂಬುದಾಗಿ ಆದಾಯ ತೆರಿಗೆ ಇಲಾಖೆ ವಾದಿಸುತ್ತಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತ.ನಾಡು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆಶಿ
ಪಠ್ಯವೇ ಇಲ್ಲದೆ ಸಿಬಿಎಸ್ಸಿ ಸ್ಕೂಲಲ್ಲಿ ತೃತೀಯ ಭಾಷೆ!