ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ನೆಲ್ಸನ್ ಮಂಡೇಲಾ ಅವರಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ಐತಿಹಾಸಿಕ ತಾಣಗಳನ್ನು ಶನಿವಾರ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.
ನವದೆಹಲಿ: ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಮತ್ತುಮಾನವ ಹಕ್ಕುಗಳ ಹೋರಾಟಗಾರ ನೆಲ್ಸನ್ ಮಂಡೇಲಾ ಅವರಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ಐತಿಹಾಸಿಕ ತಾಣಗಳನ್ನು ಶನಿವಾರ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಇಲ್ಲಿನ ನಡೆದ ವಿಶ್ವ ಪರಂಪರೆ ಸಮಿತಿಯ ಅಧಿವೇಶನದಲ್ಲಿ ‘ಮಾನವ ಹಕ್ಕುಗಳು, ವಿಮೋಚನಾ ಹೋರಾಟ ಮತ್ತು ಸಮನ್ವಯ: ನೆಲ್ಸನ್ ಮಂಡೇಲಾ ಲೆಗಸಿ ಸೈಟ್‌ಗಳು’ ಎಂಬ ನಾಮನಿರ್ದೇಶನದೊಂದಿಗೆ ಆಫ್ರಿಕಾ ಯುನೆಸ್ಕೋದ ಮುಂದಿಟ್ಟಿತ್ತು.
ಅತ್ಯಂತ ಅಪಾಯಕಾರಿ ಪ್ರವಾಸಿ ನಗರಗಳ ಪಟ್ಟಿಲೀ ಕರಾಚಿ, ಢಾಕಾ
ನವದೆಹಲಿ: ಪ್ರಪಂಚದ ಅತ್ಯಂತ ಅಪಾಯಕಾರಿ ಪ್ರವಾಸಿ ನಗರಗಳಲ್ಲಿ ಪಟ್ಟಿಯಲ್ಲಿ ಪಾಕಿಸ್ತಾನದ ಕರಾಚಿ 2ನೇ ಸ್ಥಾನದಲ್ಲಿ ಹಾಗೂ ಬಾಂಗ್ಲಾದೇಶದ ರಾಜಧಾನಿ ಢಾಕಾ ಆರನೇ ಸ್ಥಾನದಲ್ಲಿದೆ ಎಂದು ಫೋರ್ಬ್ಸ್ ಅಡ್ವೈಸರ್ ವರದಿ ತಿಳಿಸಿದೆ. ವರದಿ ಅನ್ವಯ, ವೆನೆಜುವೆಲಾದ ಕ್ಯಾರಕಾಸ್ ನಗರ ಮೊದಲ ಸ್ಥಾನದಲ್ಲಿದೆ. ಆನಂತರ ಕರಾಚಿ, ನ್ಮಾರ್‌ನ ಯಂಗನಾ, ನೈಜೀರಿಯಾದ ಲಾಗೋಸ್, ಪಿಲಿಪೈನ್ಸ್‌ನ ಮನಿಲಾ, ಬಾಂಗ್ಲಾದೇಶದ ಢಾಕಾ, ಕೊಲಂಬಿಯಾದ ಬೊಗೋಟಾ, ಈಜಿಪ್ಟ್‌ನ ಕೈರೋ, ಮೆಕ್ಸಿಕೋನ ಮೆಕ್ಸಿಕೋ ಸಿಟಿ, ಈಕ್ವೆಡಾರ್‌ನ ಕ್ವಿಟೋ ನಗರಗಳು ಕ್ರಮವಾಗಿ ಟಾಪ್ 10 ಸ್ಥಾನ ಪಡೆದಿವೆ.ಈ ನಗರಗಳಲ್ಲಿ ಅಪರಾಧ ಪ್ರಕರಣಗಳು, ಹಿಂಸಾಚಾರ, ಭೀಕರ ಆರ್ಥಿಕ ತೊಂದರೆ ಹಾಗೂ ಭಯೋತ್ಪಾದಕ ದಾಳಿ ಇನ್ನಿತರೆ ತೊಂದರೆಗಳಿಂದ ಪ್ರವಾಸಿಗರ ಸುರಕ್ಷತೆಗೆ ಅಷ್ಟು ಸೂಕ್ತವಲ್ಲ ಎಂದು ವರದಿ ಹೇಳಿದೆ.
ಮಂಡೇಲಾ ಸ್ವಾತಂತ್ರ್ಯ ಹೋರಾಟ ಸ್ಥಳಗಳು ವಿಶ್ವ ಪರಂಪರೆ ಪಟ್ಟಿಗೆ
ನವದೆಹಲಿ: ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಮತ್ತುಮಾನವ ಹಕ್ಕುಗಳ ಹೋರಾಟಗಾರ ನೆಲ್ಸನ್ ಮಂಡೇಲಾ ಅವರಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ಐತಿಹಾಸಿಕ ತಾಣಗಳನ್ನು ಶನಿವಾರ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಇಲ್ಲಿನ ನಡೆದ ವಿಶ್ವ ಪರಂಪರೆ ಸಮಿತಿಯ ಅಧಿವೇಶನದಲ್ಲಿ ‘ಮಾನವ ಹಕ್ಕುಗಳು, ವಿಮೋಚನಾ ಹೋರಾಟ ಮತ್ತು ಸಮನ್ವಯ: ನೆಲ್ಸನ್ ಮಂಡೇಲಾ ಲೆಗಸಿ ಸೈಟ್‌ಗಳು’ ಎಂಬ ನಾಮನಿರ್ದೇಶನದೊಂದಿಗೆ ಆಫ್ರಿಕಾ ಯುನೆಸ್ಕೋದ ಮುಂದಿಟ್ಟಿತ್ತು.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪಾಕಿಸ್ತಾನಿ ಗಡಿ ನಾಗರಿಕರ ಜೊತೆ ಚರ್ಚಿಸಿ: ಮೆಹಬೂಬಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸಮಸ್ಯೆಗಳನ್ನು ಚರ್ಚಿಸಲು ಪಾಕಿಸ್ತಾನದೊಂದಿಗೆ ಗಡಿ ನಿಯಂತ್ರಣ ರೇಖೆಯ ಎರಡೂ ಕಡೆಯ ಜನಪ್ರತಿನಿಧಿಗಳ ಸಮಿತಿಯನ್ನು ರಚಿಸುವಂತೆ ಪೀಪಲ್ಸ್ ಡೆಮೊಕ್ರೆಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಪಿಡಿಪಿಯ 25ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಭಾರತಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುವ ಗೃಹ ಸಚಿವರು, ಆ ಕೆಲಸ ಆಗುವವರೆಗೂ ಕಾಶ್ಮೀರ ಹಾಗೂ ಪಿಒಕೆಯ ಜನ ಪ್ರತಿನಿಧಿಗಳ ಸಮಿತಿ ರಚಿಸಿ ನಮ್ಮನ್ನು ಒಟ್ಟಿಗೆ ಸೇರಿಸಲಿ. ವರ್ಷಕ್ಕೆ ಎರಡು ಬಾರಿ ಒಟ್ಟಿಗೆ ಕುಳಿತು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿಕೊಳ್ಳುತ್ತೇವೆ ಎಂದು ಮುಫ್ತಿ ತಿಳಿಸಿದರು.
E. ದ್ವಿಚಕ್ರ ವಾಹನಗಳ ಸಬ್ಸಿಡಿ ಮತ್ತೆ 2 ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ
ನವದೆಹಲಿ: ಫೇಮ್ ಯೋಜನೆಯ ಅನುಪಸ್ಥಿತಿಯಲ್ಲಿ ಸರ್ಕಾರ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಸಬ್ಸಿಡಿಯನ್ನು 2 ತಿಂಗಳು ವಿಸ್ತರಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕಲ್ ಮೊಬಿಲಿಟಿ ಪ್ರಮೋಷನ್ ಸ್ಕೀಂ(ಇಎಂಪಿಎಸ್) ಅನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದೆ. ಇದರಿಂದ ಎಲೆಕ್ಟ್ರಿಲ್ ದ್ವಿಚಕ್ರ ವಾಹನಗಳ ಸಬ್ಸಿಡಿ500 ಕೋಟಿ ರು.ನಿಂದ 778 ಕೋಟಿ ರು.ಗೆ ಏರಿಕೆ ಆಗಿದೆ. ಈ ಹೊಸ ಯೋಜನೆಯು ಜನ ಸಾಮಾನ್ಯರಿಗೆ ಕೈಗೆಟುಕುವ ಹಾಗೂ ಪರಿಸರ ಸ್ನೇಹಿ ವಾಹನಗಳನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಖಾಸಗಿ ಅಥವಾ ವಾಣಿಜ್ಯಕ್ಕಾಗಿ ಬಳಸಲು ಖರೀದಿಸುವ ಎಲೆಕ್ಟ್ರಿಲ್ ದ್ವಿ ಮತ್ತು ತ್ರಿ ಚಕ್ರ ವಾಹನಗಳ ಮೇಲೆ ಸಬ್ಸಿಡಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.