ಎಚ್‌ಎಂಪಿವಿ ಹೊಸ ವೈರಸ್ ಅಲ್ಲ - ಇದು ಹಳೇ ವೈರಸ್, ಆತಂಕ ಬೇಡ : ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ

KannadaprabhaNewsNetwork |  
Published : Jan 07, 2025, 12:15 AM ISTUpdated : Jan 07, 2025, 04:49 AM IST
ವೈರಸ್‌ | Kannada Prabha

ಸಾರಾಂಶ

ಎಚ್‌ಎಂಪಿವಿ ವೈರಾಣು ಈಗಾಗಲೇ ವಿಶ್ವದಲ್ಲೇ ಚಾಲ್ತಿಯಲ್ಲಿರುವ ವೈರಾಣುವಾಗಿದ್ದು, ಅದರಲ್ಲಿ ಭಾರತವೂ ಇದೆ. ಆದರೆ ಇದನ್ನು ಎದುರಿಸಲು ಸರ್ವಸನ್ನದ್ಧವಾಗಿದ್ದೇವೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

ನವದೆಹಲಿ: ‘ಎಚ್‌ಎಂಪಿವಿ ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ . ಇದನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು ಮತ್ತು ಇದು ಹಲವು ವರ್ಷಗಳಿಂದ ಇಡೀ ಪ್ರಪಂಚದಲ್ಲಿ ಹರಡುತ್ತಿದೆ

 ಅಲ್ಲದೆ ಎಎಂಪಿವಿ ವೈರಾಣು ಈಗಾಗಲೇ ವಿಶ್ವದಲ್ಲೇ ಚಾಲ್ತಿಯಲ್ಲಿರುವ ವೈರಾಣುವಾಗಿದ್ದು, ಅದರಲ್ಲಿ ಭಾರತವೂ ಇದೆ. ಆದರೆ ಇದನ್ನು ಎದುರಿಸಲು ಸರ್ವಸನ್ನದ್ಧವಾಗಿದ್ದೇವೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. 

ಐಸಿಎಂಆರ್‌ ತಜ್ಞರು ಕೂಡ ಇದೇ ತೆರನಾದ ಹೇಳಿಕೆ ನೀಡಿ, ‘ಕೆಲ ಪ್ರಕರಣಗಳು ಪತ್ತೆಯಾದ ಹೊರತಾಗಿಯೂ, ಸದ್ಯ ಭಾರತದಲ್ಲಿ ಇನ್‌ಫ್ಲ್ಯೂಯೆಂಜಾ ರೀತಿಯ ಕಾಯಿಲೆ ಅಥವಾ ತೀವ್ರತೆರನಾದ ಉಸಿರಾಟದ ತೊಂದರೆಯ ವ್ಯಾಧಿಗಳ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದುದು ಐಸಿಎಂಆರ್‌, ಐಡಿಎಸ್‌ಪಿಗಳ ದತ್ತಾಂಶಗಳಿಂದ ಕಂಡುಬಂದಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!