ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನೆ ಪಕ್ಕ ಯಾರಿಗಾರೂ ಮನೆ ಮಾಡಬೇಕು ಎಂದು ಆಸೆ ಇದ್ದರೆ ಅವರಿಗೊಂದು ಸಿಹಿ ಸುದ್ದಿ.ಮುಂಬೈನ ಜುಹೂ ಪ್ರಾಂತ್ಯದಲ್ಲಿರುವ ಅಮಿತಾಭ್ ಬಚ್ಚನ್ ಅವರ ಜಾಲ್ಸಾ ನಿವಾಸದ ಪಕ್ಕದ ಮನೆ ಮಾರಾಟಕ್ಕಿದೆ. ಈ ಮನೆಯನ್ನು ಡಚ್ಚಿಸ್‌ಲ್ಯಾಂಡ್ ಬ್ಯಾಂಕ್ ಹರಾಜು ಪ್ರಕ್ರಿಯೆಗೆ ಒಳಪಡಿಸಿದ್ದು, ಇದರ ಮೂಲ ಬೆಲೆ 25 ಕೋಟಿ ರು. ನಿಗದಿಪಡಿಸಿದೆ. ಈ ಮನೆಯ 3339 ಚದರ ಅಡಿ ಇದ್ದು, ಇದರ ಹರಾಜು ಮಾ.27ರಂದು ನಡೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ.