ಹಾವು ಓಡಿಸಲು ಹಚ್ಚಿದಬೆಂಕಿ ಮನೆಯನ್ನೇ ಸುಟ್ಟಿತು

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಮನೆಗೆ ಬಂದ ಹಾವನ್ನು ಓಡಿಸಲು ಹೋಗಿ ಮನೆ ಬೆಂಕಿಗಾಹುತಿಯಾದ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ. ರಾಜ್‌ಕುಮಾರ್ ಎಂಬುದವರ ಮನೆಯಲ್ಲಿ ಭಾನುವಾರ ನಾಗರಹಾವು ಕಾಣಿಸಿಕೊಂಡಿತ್ತು.
ಮನೆಗೆ ಬಂದ ಹಾವನ್ನು ಓಡಿಸಲು ಹೋಗಿ ಮನೆ ಬೆಂಕಿಗಾಹುತಿಯಾದ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ. ರಾಜ್‌ಕುಮಾರ್ ಎಂಬುದವರ ಮನೆಯಲ್ಲಿ ಭಾನುವಾರ ನಾಗರಹಾವು ಕಾಣಿಸಿಕೊಂಡಿತ್ತು. ಇದನ್ನು ಹೊರಗೆ ಓಡಿಸುವ ಸಲುವಾಗಿ ದಂಪತಿ ಬೆರಣಿಗೆ ಬೆಂಕಿ ಕೊಟ್ಟು ಅದರಿಂದ ಹೊಗೆ ಮಾಡಿದರು. ಆದರೆ ದುರದೃಷ್ಟವಶಾತ್‌ ಆ ಹೊಗೆ ಬೆಂಕಿಯಾಗಿ ವ್ಯಾಪಿಸಿ ಇಡೀ ಮನೆಯನ್ನು ಆಹುತಿ ಪಡೆದುಕೊಂಡಿದೆ. ಅದೃಷ್ಟವಶಾತ್‌ ರಾಜಕುಮಾರ್‌ ದಂಪತಿ ಹಾಗೂ ಆತನ ಐವರು ಮಕ್ಕಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.

Share this article