ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಅನ್ವಯ ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯದವರಿಗೆ ಯಾವುದೇ ತೆರಿಗೆ ಇಲ್ಲ ಎಂದು ಘೋಷಿಸಿದೆ. ಆದರೆ ಆದಾಯ 12 ಲಕ್ಷ ರು. ದಾಟಿದರೆ ಶೇ.15ರ ತೆರಿಗೆ ವ್ಯಾಪ್ತಿಗೆ ಒಳಪಡಬೇಕಾಗುತ್ತದೆ.
ಆದರೆ ಈ ನಿಯಮದ ಹೊರತಾಗಿಯೂ ಕೇಂದ್ರ ಸರ್ಕಾರ ತೆರಿಗೆ ವೇತನದಾರರಿಗೆ 2 ಅವಕಾಶಗಳನ್ನು ನೀಡಿದೆ. ಅವುಗಳನ್ನು ಬಳಸಿಕೊಂಡು ವಾರ್ಷಿಕ ಆದಾಯ 12 ಲಕ್ಷ ದಾಟಿದರೂ ತೆರಿಗೆ ಪಾವತಿ ತಪ್ಪಿಸಿಕೊಳ್ಳಬಹುದು.
ಮೊದಲ ಅವಕಾಶ:ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯ ಯಾವುದೇ ವೇತನದಾರರ 75000 ರು. ಗಳ ವಿನಾಯ್ತಿ ಪಡೆಯಲು ಅರ್ಹ. ಇದನ್ನ ಬಳಸಿಕೊಂಡರೆ, ವಾರ್ಷಿಕ ಆದಾಯ 127500ಕ್ಕೆ ತಲುಪಿದರೂ ತೆರಿಗೆ ಪಾವತಿಯಿಂದ ಪಾರಾಗಬಹುದು.
2ನೇ ಅವಕಾಶ:ಇನ್ನು ಎರಡನೇ ಅವಕಾಶ ಎನ್‌ಪಿಎಸ್‌ನದ್ದು. ಈ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಒಂದು ವೇಳೆ ವೇತನದಾರರು ತಮ್ಮ ವೇತನದಿಂದ ಪಿಂಚಣಿ ಯೋಜನೆಗೆ ಹಣ ಪಾವತಿ ಮಾಡುತ್ತಿದ್ದರೆ ಆ ಹಣವನ್ನು ಆದಾಯದಿಂದ ಕಡಿತ ಮಾಡಬಹುದು. ಆದರೆ ಇಲ್ಲಿ ಗ್ರಾಹಕರು ವಾರ್ಷಿಕ ಪಾವತಿ ಮಾಡುವ ಮೊತ್ತಕ್ಕೆ ಮಿತಿ ಇದೆ. ಆ ಮಿತಿಯೊಳಗಿನ ಪೂರ್ಣ ಮೊತ್ತವನ್ನೂ ಆದಾಯದಲ್ಲಿ ಕಡಿತ ಮಾಡುವ ಅವಕಾಶವಿದೆ.
ಹೀಗೆ ಎರಡೂ ಅವಕಾಶವನ್ನು ಬಳಸಿಕೊಂಡು ವೇತನದಾರರು ತಮ್ಮ ಆದಾಯದ ಮಿತಿಯನ್ನು 12 ಲಕ್ಷ ರು.ನೊಳಗೇ ಇರಿಸಿಕೊಂಡು ತೆರಿಗೆ ಪಾವತಿಯಿಂದ ಬಚಾವ್ ಆಗಬಹುದು.