ತೆಲುಗು ನಟ ನಾಗಚೈತನ್ಯ ಮತ್ತು ಸಮಂತಾ ಮದುವೆ ಮುರಿದು ಬೀಳಲು ರಾಮರಾವ್‌ ಕಾರಣ: ಕೊಂಡಾ ಸುರೇಖಾ

KannadaprabhaNewsNetwork |  
Published : Oct 03, 2024, 01:21 AM ISTUpdated : Oct 03, 2024, 05:31 AM IST
ಸಮಂತಾ | Kannada Prabha

ಸಾರಾಂಶ

ತೆಲುಗು ನಟ ನಾಗಚೈತನ್ಯ ಮತ್ತು ಸಮಂತಾ ಮದುವೆ ಮುರಿದು ಬೀಳಲು ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್‌ ಪುತ್ರ ಕೆ.ಟಿ.ರಾಮರಾವ್‌ ಕಾರಣ ಎಂದು ಹಾಲಿ ಅರಣ್ಯ ಸಚಿವೆ ಕೊಂಡಾ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್‌: ತೆಲುಗು ನಟ ನಾಗಚೈತನ್ಯ ಮತ್ತು ಸಮಂತಾ ಮದುವೆ ಮುರಿದು ಬೀಳಲು ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್‌ ಪುತ್ರ ಕೆ.ಟಿ.ರಾಮರಾವ್‌ ಕಾರಣ ಎಂದು ಹಾಲಿ ಅರಣ್ಯ ಸಚಿವೆ ಕೊಂಡಾ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಸುರೇಖಾ, ‘ಅನೇಕ ನಟಿಯರು ಬೇಗ ಮದುವೆಯಾಗಲು ಮತ್ತು ಅವರ ವೈವಾಹಿಕ ಜೀವನ ಮುರಿದು ಬೀಳಲು ಕೆ.ಟಿ.ರಾಮರಾವ್‌ ಕಾರಣ. ಅವರು ನಟಿಯರಿಗೆ ಡ್ರಗ್ಸ್‌ ನೀಡಿ, ಅದಕ್ಕೆ ಅವರು ವ್ಯಸನಿಗಳಾಗುವಂತೆ ಮಾಡುತ್ತಾರೆ. ಬಳಿಕ ಅವರು ನಟಿಯರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ನಾಗಚೈತನ್ಯ ತಂದೆ ನಟ ನಾಗರ್ಜುನ ಪ್ರತಿಕ್ರಿಯಿಸಿದ್ದು,‘ಇದು ಸಂಪೂರ್ಣ ಸುಳ್ಳು. ರಾಜಕೀಯದಿಂದ ದೂರವಿರುವ ಕಲಾವಿದರನ್ನು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಿಕೊಳ್ಳಬೇಡಿ. ಬೇರೆಯವರ ವೈಯುಕ್ತಿಕ ಬದುಕನ್ನು ಗೌರವಿಸಿ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ
ನೋಟಿಸ್‌ ಕೊಟ್ಟವರ ಮನೆಗೇ ಇನ್ನು ಅಧಿಕಾರಿಗಳ ಬರ್ತಾರೆ-ಎಸ್‌ಐಆರ್‌ ನಿಯಮ ಸಡಿಲ