ಚೀನಾಕ್ಕೆ ಹೊಂದಿಕೊಂಡ ಅರುಣಾಚಲದಲ್ಲೂ ಏರ್‌ಶೋ ಯೋಜನೆ: ವಾಯುಪಡೆ

KannadaprabhaNewsNetwork | Updated : Oct 16 2023, 11:38 AM IST

ಸಾರಾಂಶ

ಚೀನಾದೊಂದಿಗೆ ಗಡಿ ಹೊಂದಿರುವ ಅರುಣಾಚಲ ಪ್ರದೇಶದಲ್ಲೂ ವೈಮಾನಿಕ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ವಾಯುಪಡೆಯ ಪೂರ್ವ ವಿಭಾಗದ ಏರ್‌ ಮಾರ್ಷಲ್‌ ಎಸ್‌ಪಿ ಧಾರ್ಕರ್‌ ತಿಳಿಸಿದ್ದಾರೆ.
ಗುವಾಹಟಿ: ಚೀನಾದೊಂದಿಗೆ ಗಡಿ ಹೊಂದಿರುವ ಅರುಣಾಚಲ ಪ್ರದೇಶದಲ್ಲೂ ವೈಮಾನಿಕ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ವಾಯುಪಡೆಯ ಪೂರ್ವ ವಿಭಾಗದ ಏರ್‌ ಮಾರ್ಷಲ್‌ ಎಸ್‌ಪಿ ಧಾರ್ಕರ್‌ ತಿಳಿಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧಾರ್ಕರ್‌, ‘ಭವಿಷ್ಯದಲ್ಲಿ ಖಂಡಿತವಾಗಿ ಅರುಣಾಚಲ ಪ್ರದೇಶದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಗುರಿ ಹೊಂದಿದ್ದೇವೆ. ಆ ಮೂಲಕ ಸ್ಥಳಿಯರಿಗೆ ಸೇನೆಯ ಬಲಾಢ್ಯ ಶಕ್ತಿಯುತ ಸಲಕರಣೆ ಪರಿಚಯಿಸುವ ಉದ್ದೇಶವಿದೆ’ ಎಂದು ತಿಳಿಸಿದರು. ಅರುಣಾಚಲ ಭಾರತದ ಭಾಗ ಎಂದು ಒಪ್ಪದ ಚೀನಾ ಇಲ್ಲಿನ ಪ್ರತಿ ಬೆಳವಣಿಗೆಯನ್ನು ಚೀನಾ ಟೀಕಿಸುತ್ತದೆ.

Share this article