ಅಮೆರಿಕ ದಾಳಿ ಮಾಡಿದ್ರೆ ಮುಂಬೈ, ದಿಲ್ಲಿಗೆ ಬಾಂಬ್‌ : ಪಾಕ್‌ ಮಾಜಿ ದೂತ

KannadaprabhaNewsNetwork |  
Published : Mar 23, 2026, 02:15 AM IST
Pakistan

ಸಾರಾಂಶ

ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಅವರ ನೆಲೆಗಳನ್ನು ತಲುಪಲು ಸಾಧ್ಯವಿಲ್ಲ. ಹಾಗಾಗಿ ಅಮೆರಿಕದ ಮಿತ್ರ ದೇಶವಾದ ಭಾರತದ ಮೇಲೆ ಬಾಂಬ್‌ ಹಾಕಲು ಹಿಂದೆ ಮುಂದೆ ನೋಡಬಾರದು ಎಂದು ಭಾರತಕ್ಕೆ ಪಾಕಿಸ್ತಾನದ ಮಾಜಿ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಸ್ಲಾಮಾಬಾದ್: ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಅವರ ನೆಲೆಗಳನ್ನು ತಲುಪಲು ಸಾಧ್ಯವಿಲ್ಲ. ಹಾಗಾಗಿ ಅಮೆರಿಕದ ಮಿತ್ರ ದೇಶವಾದ ಭಾರತದ ಮೇಲೆ ಬಾಂಬ್‌ ಹಾಕಲು ಹಿಂದೆ ಮುಂದೆ ನೋಡಬಾರದು ಎಂದು ಭಾರತಕ್ಕೆ ಪಾಕಿಸ್ತಾನದ ಮಾಜಿ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಅಮೆರಿಕ ದೀರ್ಘಶ್ರೇಣಿ ಬ್ಯಾಲೆಸ್ಟಿಕ್‌ ಕ್ಷಿಪಣಿ ಸಿದ್ಧಪಡಿಸುತ್ತಿದೆ’ ಎಂಬ ಅಮೆರಿಕ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಮ್ಮ ಬಳಿ ಅಂಥ ಕ್ಷಿಪಣಿ ಇಲ್ಲ

‘ನಮ್ಮ ಬಳಿ ಅಂಥ ಕ್ಷಿಪಣಿ ಇಲ್ಲ. ಭಾರತದ ಬಳಿ ಅಗ್ನಿ ಕ್ಷಿಪಣಿ ಇದೆ. ಆದರೆ ಭಾರತೀಯ ಮೂಲದ ತುಳಸಿ ಭಾರತ ಬಿಟ್ಟು ಬೇಕೆಂದೇ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಕನಿಷ್ಠ ಪಕ್ಷ ನಮ್ಮ ಬಳಿ ಇಸ್ರೇಲ್‌ ತಲುಪಬಲ್ಲ ಕ್ಷಿಪಣಿಯಾದರೂ ಇರಲಿ ಎಂದು ಆಶಿಸುವೆ’ ಎಂದರು.ಇದೇ ವೇಳೆ, ‘ಅಮೆರಿಕವು ಭಾರತದ ಯುದ್ಧ ತಂತ್ರದ ಪಾಲುದಾರ. ಹೀಗಾಗಿ ಅಮೆರಿಕ ಪಾಕ್‌ ಮೇಲೆ ದಾಳಿ ಮಾಡುವಂತಹ ಸಂದರ್ಭ ಬಂದರೆ, ನಾವು ಅವರ ನೆಲೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಆಗ ನಮ್ಮ ಆಯ್ಕೆ ಯಾವುದು? ಭಾರತ. ಏಕೆಂದರೆ ಭಾರತವು ಅಮೆರಿಕದ ಮಿತ್ರ. ಯಾರಾದರೂ ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ಯಾವುದೇ ಹಿಂಜರಿಕೆ ಇಲ್ಲದೆ ಮುಂಬೈ ಮತ್ತು ನವದೆಹಲಿ ಮೇಲೆ ದಾಳಿ ಮಾಡಬೇಕು’ ಎಂದರು.

ಅಮೆರಿಕ ಮೇಲೆ ದಾಳಿ ಮಾಡಿಲ್ಲ

ಇರಾನ್‌ ತನ್ನ ಮೇಲೆ ದಾಳಿ ಮಾಡಿದರೂ ಅಮೆರಿಕ ಮೇಲೆ ದಾಳಿ ಮಾಡಿಲ್ಲ. ಬದಲಾಗಿ ಅಮೆರಿಕದ ಮಿತ್ರ ದೇಶಗಳಾದ ಗಲ್ಫ್ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಪಾಕ್‌ ಮೇಲೆ ಅಮೆರಿಕ ದಾಳಿ ಮಾಡಿದರೆ ಅಮೆರಿಕದ ಮಿತ್ರ ದೇಶ ಭಾರತದ ಮೇಲೆ ದಾಳಿ ಮಾಡಬೇಕು ಎಂಬುದು ಬಸಿತ್ ಹೇಳಿಕೆ ಸಾರಾಂಶ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!