ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್‌ : ಏಕ ಚುನಾವಣೆ ವಿಧೇಯಕ

KannadaprabhaNewsNetwork |  
Published : Dec 15, 2024, 02:00 AM ISTUpdated : Dec 15, 2024, 04:41 AM IST
ಸಂಸತ್‌ | Kannada Prabha

ಸಾರಾಂಶ

ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿದೆ. 5 ವರ್ಷಕ್ಕೂ ಮುನ್ನವೇ ಚುನಾಯಿತ ಸರ್ಕಾರ ಬಿದ್ದರೆ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ ಎಂಬ ಮಹತ್ವದ ಅಂಶಗಳು ಇದರಲ್ಲಿದೆ.

  ನವದೆಹಲಿ :  ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿದೆ. 5 ವರ್ಷಕ್ಕೂ ಮುನ್ನವೇ ಚುನಾಯಿತ ಸರ್ಕಾರ ಬಿದ್ದರೆ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ ಎಂಬ ಮಹತ್ವದ ಅಂಶಗಳು ಇದರಲ್ಲಿದೆ.

5 ವರ್ಷಕ್ಕೂ ಮೊದಲೇ ಸರ್ಕಾರ ಬಿದ್ದರೆ ಸರ್ಕಾರ ಅಪೂರ್ಣವಾಗುತ್ತದೆ. ಉಳಿದ ಅವಧಿಗೆ ಏನು ಮಾಡುತ್ತೀರಿ? ಸರ್ಕಾರ ಇಲ್ಲದೇ ರಾಷ್ಟ್ರಪತಿ ಆಳ್ವಿಕೆ ಹೇರಿ ಆಡಳಿತ ನಡೆಸುತ್ತೀರಾ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳಿದ್ದವು. ಅದಕ್ಕೆ ಉತ್ತರ ನೀಡುವ ಯತ್ನವನ್ನು ಗುರುವಾರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಮಸೂದೆಯಲ್ಲಿ ಮಾಡಲಾಗಿದೆ.

ಮಸೂದೆಯಲ್ಲೇನಿದೆ?:

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವುದು ಅಗತ್ಯ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪದೇ ಪದೇ ಚುನಾವಣೆ ನಡೆಯುವುದರಿಂದ ಆಗುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಸೂದೆ ಹೇಳಿದೆ.

ಈ ವಿಧೇಯಕವು ಸಂವಿಧಾನಕ್ಕೆ ಹೊಸ ಅನುಚ್ಛೇದ ಸೇರ್ಪಡೆಗೊಳಿಸುವುದಲ್ಲದೆ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ರೀತಿಯಲ್ಲಿ ಮೂರು ಅನುಚ್ಛೇದಗಳ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ.

ಒಂದು ವೇಳೆ ಅವಧಿಗೆ ಮುನ್ನವೇ ಸರ್ಕಾರ ಪತನಗೊಂಡರೆ ಮುಂದೇನು ಎಂಬುದಕ್ಕೂ ಈ ವಿಧೇಯಕದಲ್ಲಿ ಉತ್ತರವಿದೆ. ಅಂಥ ಪರಿಸ್ಥಿತಿಯಲ್ಲಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಬಾಕಿ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ. ಅಂದರೆ (ಉದಾಹರಣೆಗೆ) ಸರ್ಕಾರ ಮೂರೇ ವರ್ಷಕ್ಕೆ ಪತನಗೊಂಡರೆ ಮುಂದಿನ ಎರಡು ವರ್ಷಕ್ಕಷ್ಟೇ ಮರು ಚುನಾವಣೆ ನಡೆಯಲಿದೆ. ಹೊಸ ಸರ್ಕಾರ 3 ವರ್ಷ ಪೂರೈಸಿದ ನಂತರ ಮತ್ತೆ ವಿಧಾನಸಭೆ/ಲೋಕಸಭೆ ಚುನಾವಣೆ ಒಟ್ಟಿಗೇ ನಡೆಯಲಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪವಾಡ: ನಾಪತ್ತೆ ಆಗಿದ್ದ 1 ಉಪಗ್ರಹ ಕಕ್ಷೆಗೆ!
ಶಕ್ಸ್‌ಗಂ ಕಣಿವೆ ನಮ್ಮದು: ಚೀನಾ ಪುನರುಚ್ಚಾರ