ರೈಲು ಹಳಿಗಳ ನಡುವೆ ಸೌರಫಲಕ ಅಳವಡಿಕೆ : ಪ್ರಾಯೋಗಿಕ ಪರೀಕ್ಷೆ

KannadaprabhaNewsNetwork |  
Published : Aug 18, 2025, 12:02 AM IST
ಪರೀಕ್ಷೆ | Kannada Prabha

ಸಾರಾಂಶ

ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.

ನವದೆಹಲಿ: ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.

ವಾರಾಣಸಿಯ ಬನಾರಸ್‌ ಲೋಕೋಮೋಟಿವ್ ವರ್ಕ್ಸ್‌ ಉತ್ಪಾದನಾ ಘಟಕದಲ್ಲಿ 70 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಈ ಸೌರಫಲಕಗಳನ್ನು ಅಳವಡಿಸಲಾಗಿದೆ, ಈ ಸೌರಫಲಕವು ನಿತ್ಯ 67 ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ನಿರೀಕ್ಷೆಯಿದೆ.

 ಗರಿಷ್ಠ 15 ಕಿಲೋವ್ಯಾಟ್‌ ಉತ್ಪಾದಿಸುವ 28 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೆಯ 1.2 ಲಕ್ಷ ಕಿಮೀ ಟ್ರ್ಯಾಕ್ ನೆಟ್‌ವರ್ಕ್‌ಗಳಿಗೆ ಅಳವಡಿಸುವ ಚಿಂತನೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗ್ವತ್‌ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತ
ಟಿಎಂಸಿಯಿಂದ ಮಮತಾ ಔಟ್‌?