ದೇಶ ವಿದೇಶಗಳಲ್ಲೂ ಯೋಗ ಸಂಭ್ರಮ

KannadaprabhaNewsNetwork |  
Published : Jun 22, 2024, 12:46 AM ISTUpdated : Jun 22, 2024, 04:42 AM IST
ನ್ಯೂಯಾರ್ಕ್‌ | Kannada Prabha

ಸಾರಾಂಶ

ಅಮೆರಿಕ, ಚೀನಾ, ಇಸ್ರೇಲ್‌ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

  ನ್ಯೂಯಾರ್ಕ್‌/ ಟೆಲ್‌ ಅವಿವ್‌ಅಮೆರಿಕ, ಚೀನಾ, ಇಸ್ರೇಲ್‌ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಎಲ್ಲೆಡೆ ಯೋಗ ದಿನಾಚರಣೆ ಏರ್ಪಡಿಸಲಾಗಿತ್ತು. ಭಾರತದ ಎಲ್ಲ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಯೋಗದಲ್ಲಿ ಮಾಡುವ ಮೂಲಕ ಆಚರಿಸಿದರು.

ಯೋಗ ದಿನದಂದು ಸೇನಾ ಪಡೆಗಳು ಜಮ್ಮು ಕಾಶ್ಮೀರದ ಸಿಯಾಚಿನ್‌ ಅತಿ ಎತ್ತರ ನೀರ್ಗಲ್ಲು ಯುದ್ಧಭೂಮಿಯಲ್ಲಿ ಯೋಗಾಭ್ಯಾಸ ನಡೆಸಿತು. ರಾಮೇಶ್ವರದಲ್ಲಿ ಯೋಗಾಸಕ್ತರು ಜಲಯೋಗ ನಡೆಸುವ ಮೂಲಕ ಗಮನ ಸೆಳೆದರು. ಎಲ್ಲಾ ರಾಜ್ಯದ ಪ್ರಮುಖ ಸ್ಥಳಗಳು, ಪ್ರವಾಸಿ ಕೇಂದ್ರಗಳಲ್ಲಿ ಸಾರ್ವಜನಿಕರು ಯೋಗಾಸನ ನಡೆಸಿದರು.

ಮತ್ತೊಂದೆಡೆ ವರ್ಷಗಳಿಂದ ಹಿಂಸೆಗೆ ತುತ್ತಾಗಿದ್ದ ಮಣಿಪುರದಲ್ಲಿ ಮುಖ್ಯಮಂತ್ರಿ ಎನ್‌ ಬಿರೇನ್ ಸಿಂಗ್‌ ಅವರ ನೇತೃತ್ವದಲ್ಲಿ ಯೋಗಾಸನ ನಡೆಯಿತು.

ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಯೋಗ ತಜ್ಞರು ಸಾಮೂಹಿಕ ಯೋಗಾಸನ ಕಾರ್ಯಕ್ರಮ ನಡೆಸಿಕೊಟ್ಟರು. ವಾಷಿಂಗ್ಟನ್‌ನಲ್ಲೂ ಸಾವಿರಾರು ಯೋಗಾಸಕ್ತರು ಮೈದಾನದಲ್ಲಿ ಯೋಗಾಸನ ಮಾಡಿದರು.

ಇಸ್ರೇಲ್‌ನಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಟೆಲ್‌ ಅವಿವ್‌ನ ಪೆರೆಸ್‌ ಸೆಂಟರ್‌ನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ವತಃ ದೇಶದ ಪ್ರಥಮ ಮಹಿಳೆ ಮಿಶೇಲ್‌ ಹರ್‌ಜೋಗ್‌ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸಿಂಗಾಪುರದಲ್ಲಿ ಆರೋಗ್ಯ ಸಚಿವರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು. ನೇಪಾಳದ ಪೊಖಾರಾದಲ್ಲಿ ಮೂರು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಯೋಗ ದಿನಾಚರಣೆ ಏರ್ಪಡಿಸಲಾಗಿತ್ತು. ಅಲ್ಲದೆ, ಬುದ್ಧನ ಜನ್ಮಸ್ಥಳ ಲುಂಬಿನಿಯಲ್ಲೂ ಸಾಮೂಹಿಕ ಯೋಗಾಸನ ನಡೆಯಿತು. 

ಸ್ವತಃ ಲುಂಬಿನಿಯ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಶ್ರೀಲಂಕಾದ ಜಾಫ್ನಾ, ಕ್ಯಾಂಡಿ ಮುಂತಾದ ಕಡೆ ಯೋಗ ದಿನಾಚರಣೆಯ ಕಾರ್ಯಕ್ರಮಗಳು ನಡೆದವು. ಹಾಗೆಯೇ, ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಯೋಗ ದಿನಾಚರಣೆ ನಡೆಯಿತು. ರೋಮ್‌ನಲ್ಲೂ ಸಾಮೂಹಿಕ ಯೋಗಾಸನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.2014ರಲ್ಲಿ ವಿಶ್ವಸಂಸ್ಥೆಯು ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ. ಜಗತ್ತಿನ 175 ದೇಶಗಳು ಅದನ್ನು ಬೆಂಬಲಿಸಿವೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ