5 ದಿನದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

KannadaprabhaNewsNetwork |  
Published : May 17, 2026, 03:00 AM IST
woman

ಸಾರಾಂಶ

ಮಹಿಳೆಯೊಬ್ಬರು 5 ದಿನಗಳ ಅವಧಿಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದೆ. ದುರದೃಷ್ಟವಶಾತ್‌ ಮೊದಲ ಶಿಶು ಸಾವನ್ನಪ್ಪಿದೆ. ಉಳಿದ 3 ಶಿಶುಗಳಲ್ಲಿ ಒಂದು ಆರೋಗ್ಯವಾಗಿದೆ. ಎಲ್ಲಾ ನಾಲ್ಕು ಮಕ್ಕಳು ಕೂಡಾ ಸಹಜ ಹೆರಿಗೆ ಮೂಲಕವೇ ಜನ್ಮ ತಾಳಿದ್ದು ಕೂಡಾ ವಿಶೇ಼ಷ.

ಬರೇಲಿ: ಮಹಿಳೆಯೊಬ್ಬರು 5 ದಿನಗಳ ಅವಧಿಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದೆ. ದುರದೃಷ್ಟವಶಾತ್‌ ಮೊದಲ ಶಿಶು ಸಾವನ್ನಪ್ಪಿದೆ. ಉಳಿದ 3 ಶಿಶುಗಳಲ್ಲಿ ಒಂದು ಆರೋಗ್ಯವಾಗಿದ್ದು, ಮತ್ತೆರಡಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. 

ನಾಲ್ಕು ಮಕ್ಕಳು ಕೂಡಾ ಸಹಜ ಹೆರಿಗೆ

ಎಲ್ಲಾ ನಾಲ್ಕು ಮಕ್ಕಳು ಕೂಡಾ ಸಹಜ ಹೆರಿಗೆ ಮೂಲಕವೇ ಜನ್ಮ ತಾಳಿದ್ದು ಕೂಡಾ ವಿಶೇ಼ಷ.

ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ

ಅಮೀನಾ ಮೇ 9ರಂದು ಮೊರದಾಬಾದ್‌ನ ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದು 710 ಗ್ರಾಂ ತೂಕವಿತ್ತು. 5 ದಿನಗಳ ಬಳಿಕ ಮೇ 14ರಂದು ಪುನಃ 1 ಗಂಡು ಹಾಗೂ 2 ಹೆಣ್ಣುಮಕ್ಕಳಿಗೆ ಜನ್ಮವಿತ್ತಿದ್ದಾರೆ.  

ತೀರಾ ಕಡಿಮೆ ತೂಕವುಳ್ಳ ಮತ್ತು ಅವಧಿಪೂರ್ವದಲ್ಲಿ ಜನಿಸಿದ ಮೊದಲ ಮಗು ಸಾವನ್ನಪ್ಪಿದೆ. ಉಳಿದ ಶಿಶುಗಳಲ್ಲಿ ಒಂದು ಆರೋಗ್ಯವಾಗಿದ್ದು, ಎದೆಹಾಲು ಕುಡಿಯುತ್ತಿದೆ. ಆದರೆ ಮತ್ತೆರಡಕ್ಕೆ ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಗರ್ಭಾವಸ್ಥೆಯುದ್ದಕ್ಕೂ ಮಹಿಳೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಎಂದು ವೈದ್ಯರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೋಕ್ಸೊ ಆರೋಪಿ ಪುತ್ರನಪೊಲೀಸ್‌ಗೆ ಒಪ್ಪಿಸಿದ ಸಚಿವ
- ಇದು ಮಹಾವಿಪತ್ತುಗಳ ದಶಕ- ಮೊದಲು ಕೊರೋನಾ, ಬಳಿಕ ಯುದ್ಧ, ಈಗ ಇಂಧನ ಬಿಕ್ಕಟ್ಟು!ಮತ್ತೆ ಬಡತನ ಬರುತ್ತೆ ಹುಷಾರ್‌:ಮೋದಿ ಎಚ್ಚರಿಕೆ- ಪರಿಸ್ಥಿತಿ ಕೈಮೀರಿದ್ರೆ ದಶಕಗಳ ಯತ್ನ ವ್ಯರ್ಥ- ನೆದರ್ಲೆಂಡಲ್ಲಿ ಪಿಎಂ ಭಾಷಣದಿಂದ ಸಂಚಲನ